ನಾಡಿನ ಹಿರಿಯ ಸಾಹಿತಿ ಶ್ರೀನಿವಾಸ ಉಡುಪ ನಿಧನ

Srinivasa Udupa
Published on

ಬೆಂಗಳೂರು: ನಾಡಿನ ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಎನ್. ಶ್ರೀನಿವಾಸ ಉಡುಪ (84) ಅವರು ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಶ್ವರದವರಾದ ಉಡುಪ ಅವರು, ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಎರಡು ದಶಕದಿಂದ ಬೆಂಗಳೂರಿನಲ್ಲೆ ನೆಲೆಸಿದ್ದರು. ಮಕ್ಕಳ ಸಾಹಿತ್ಯ, ಕವಿತೆ, ಅಂಕಣ ಬರಹಗಳಲ್ಲಿ ತೊಡಗಿಸಿಕೊಂಡಿದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪ್ರಶಸ್ತಿ ಸೇರಿ ಅನೇಕ ಗೌರವಗಳು ಸಂದಿದ್ದವು. ವಸ್ತು ವಿನ್ಯಾಸ, ನಾಲ್ಕು ಸಾಲು, ಆಸ್ವಾದ, ಮಾರ್ದನಿ, ಕುಂಭಕರ್ಣನ ನಿದ್ದೆ ಪ್ರಮುಖ ಕೃತಿಗಳು.

ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಬನಶಂಕರಿ ಚಿತಾಗಾರದಲ್ಲಿ ಶನಿವಾರ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net