

ಗೊಳಸಂಗಿ : ರಂಗಭೂಮಿ, ಚಲನಚಿತ್ರ, ಧಾರಾವಾಹಿಗಳಲ್ಲಿ ಕಳೆದ ಐದು ದಶಕಗಳಿಂದ ತಮ್ಮದೇ ಛಾಪು ಮೂಡಿಸಿದ್ದ ಗ್ರಾಮದ ಹಿರಿಯ ರಂಗ ಕಲಾವಿದ ಮಹಿಬೂಬಸಾಬ ಮದಾರಸಾಬ ಖುರೇಷಿ (73) ಶುಕ್ರವಾರ ರಾತ್ರಿ ನಿಧನರಾದರು.
ಶ್ರೀಯುತರು 1970ರಲ್ಲಿ ರಂಗಭೂಮಿ ಪ್ರವೇಶಿಸಿ, ನೆರೆಯ ಗೋವಾ, ಮಹಾರಾಷ್ಟ್ರ ಮತ್ತು ನವದೆಹಲಿಯ ನಾಟಕಗಳಲ್ಲೂ ಮಿಂಚಿದ್ದರು. ರಂಗಭೂಮಿ ಜತೆಗೆ ಚಿತ್ರರಂಗದ ಒಡನಾಟ ಹೊಂದಿದ್ದರು. ಒಂದಾನೊಂದು ಕಾಲದಲ್ಲಿ, ಇಟಗಿ ಭೀಮಾಂಬಿಕೆ, ದಾನಮ್ಮದೇವಿ ಮಹಾತ್ಮೆ, ಅಯ್ಯ ಚಿತ್ರಗಳಲ್ಲಿ ನಟಿಸಿದ್ದಾರೆ
ಅವರು ಕಳೆದ ಎರಡು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಇಬ್ಬರು ಪತ್ನಿಯರು, ನಾಲ್ವರು ಪುತ್ರಿಯರು ಇದ್ದಾರೆ.