ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಗೆ ಪತ್ರಿಕಾ ಭೀಷ್ಮ ಪ್ರಶಸ್ತಿ ಪ್ರದಾನ

amshi prasanna kumar
Published on

ಮೈಸೂರು: ಪರಮಹಂಸ ಯೋಗ ಮಹಾವಿದ್ಯಾಲಯ ವತಿಯಿಂದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಪತ್ರಿಕಾ ಭೀಷ್ಮ ಪ್ರಶಸ್ತಿ ಹಾಗೂ ಯೋಗ ತರಬೇತಿ ಪಡೆದವರಿಗೆ ಇಂಟರ್‌ನ್ಯಾಷನಲ್ ಯೋಗ ಟೀಚರ್ ಟ್ರೈನಿಂಗ್ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ಪರಮಹಂಸ ಯೋಗ ಮಹಾವಿದ್ಯಾಲಯದ ಸ್ಥಾಪಕ ಅಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರೂ ಯೋಗ ಕಲಿತರೆ ಆರೋಗ್ಯದಿಂದ ಇರಬಹುದು. ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಆದ್ದರಿಂದ ಸಮಾಜದ ಎಲ್ಲವರ್ಗದ ಜನರು ಯೋಗದ ಮಹತ್ವ ಅರಿಯಬೇಕು ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ, ಡಾ.ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಗೋಶಾಲೆಯ ಮುಖ್ಯಸ್ಥ ಸುಂದರರಾಜ್, ಮನೋವಿಜ್ಞಾನ ತರಬೇತುದಾರ ಸುಧೀರ್ ಸುಬ್ರಹ್ಮಣ್ಯ, ವಿದ್ಯಾಲಯದ ಸಂಚಾಲಕಿಯರಾದ ಡಾ.ಆರ್. ಭಾವನಾ, ಡಾ.ಆರ್. ಅಪರ್ಣಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net