ವಚನಗಳು ಇಂದಿಗೂ ಪ್ರಸ್ತುತ

Koppa basava
ಕೊಪ್ಪ ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಡಾ. ಅಶೋಕ್ ನಾರ್ವೆ ಉದ್ಘಾಟಿಸಿದರು. ತಹಸೀಲ್ದಾರ್ ಮಂಜುಳಾ, ಚಿಂತನ್ ಬೆಳಗೊಳ ಇತರರಿದ್ದರು.
Published on

ಕೊಪ್ಪ: ಬಸವಣ್ಣ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ವಚನಗಳ ಮೂಲಕ ವಿಶ್ವದ ಗಮನ ಸೆಳೆದವರು ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅಂಜನಪ್ಪ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ಯಾವ ರೀತಿಯಲ್ಲಿ ಬದುಕಬೇಕು. ಜೀವನದಲ್ಲಿ ಯಾವುದರಿಂದ ದೂರ ಇರಬೇಕು ಎಂಬುದನ್ನು ತಿಳಿಸಿದವರು ಎಂದರು.
ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ ಮಾತನಾಡಿ, ದೇಶಕ್ಕೆ ದುಡಿದ ಹಾಗೂ ಆದರ್ಶ ವ್ಯಕ್ತಿಗಳನ್ನು ಯುವ ಪೀಳಿಗೆಗೆ ತಿಳಿಸುವ, ಅವರ ವಿಚಾರ ತಿಳಿಸುವ ಸಲುವಾಗಿ ಜಯಂತಿ ಇತರ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. ಎಲ್ಲರೂ ಇಂಥ ಕಾರ್ಯಕ್ರಮವನ್ನು ಇನ್ನಷ್ಟು ಚಂದವಾಗಿ ಆಚರಿಸದಾಗ ಸಮಾಜಕ್ಕೆ ಮತ್ತಷ್ಟು ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ. ಸರ್ಕಾರಗಳು ತಂದ ಕಾರ್ಯಕ್ರಮಕ್ಕು ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ತಹಸೀಲ್ದಾರ್ ಮಂಜುಳಾ, ಕೆಡಿಪಿ ಸದಸ್ಯರಾದ ಡಾ. ಅಶೋಕ್ ನಾರ್ವೆ, ರಾಜಾಶಂಕರ್, ಪಪಂ ಸದಸ್ಯರು, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net