ವಚನಸಾಹಿತ್ಯ ಇಂದಿಗೂ ಪ್ರಸ್ತುತ

25kst-1
ಕುಷ್ಟಗಿಯ ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಬಸವ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಮಾತನಾಡಿದರು. ಮಾಜಿ ಶಾಸಕ ಕೆ.ಶರಣಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಟಿ.ಬಸವರಾಜ, ಬಸವ ಸಮಿತಿ ಅಧ್ಯಕ್ಷ ಎಸ್.ಪಿ.ಬಿಜಕಲ್, ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಇತರರಿದ್ದರು.
Published on

ಕುಷ್ಟಗಿ: ಬಸವ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ಕಾರ್ಯುವಾಗಬೇಕಿದೆ ಎಂದು ಮಾಜಿ ಶಾಸಕ ಕೆ.ಶರಣಪ್ಪ ಹೇಳಿದರು.

ಬಸವ ಜಯಂತಿ ಕಾರ್ಯಕ್ರಮ ನಿಮಿತ್ತ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಬಸವಣ್ಣ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ. ಅವರ ವಚನಸಾಹಿತ್ಯ ಇಂದಿಗೂ ಪ್ರಸ್ತುತವಾಗಿವೆ. ಜಯಂತಿಯನ್ನು ಔಪಚಾರಿಕವಾಗಿ ಆಚರಿಸದೆ ಅರ್ಥಪೂರ್ಣವಾಗಿಸಬೇಕಿದೆ. ಇದಕ್ಕೆ ತಾಲೂಕು ಆಡಳಿತದ ಸಹಕಾರ ಅಗತ್ಯ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಟಿ.ಬಸವರಾಜ ಮಾತನಾಡಿ, ಬಸವ ಜಯಂತಿ ನಿಮಿತ್ತ ಏ.20ರಿಂದ ಬಸವ ದರ್ಶನ ಪ್ರವಚನ ಆರಂಭವಾಗಿದೆ. ವಿಜಯನಗರ ಜಿಲ್ಲೆಯ ಮಲಪನಗುಡಿ ಗ್ರಾಮದ ಬಸವಕೃಪಾನಿಧಿ ಆಶ್ರಮದ ಬಸವಕಿರಣ ಶರಣರು ಪ್ರವಚನ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಜಯಂತಿ ಕಾರ್ಯಕ್ರಮದ ದಿನವೂ ಅವರೇ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಬಸವಣ್ಣನವರ ಭಾವಚಿತ್ರ ಮೆರವಣಿಗೆ ವೇಳೆ ಬಸವ ಅನುಯಾಯಿಗಳೆಲ್ಲರೂ ವಚನ ಸಾಹಿತ್ಯದ ಕಟ್ಟುಗಳನ್ನು ಹೊತ್ತು ಸಾಗುವ ಕುರಿತು ಚರ್ಚಿಸಲಾಗಿದೆ. ಎಲ್ಲಿಂದ ಎಲ್ಲಿಯವರೆಗೆ ಎಂಬುದರ ಕುರಿತು ಹಾಗೂ ವಿವಿಧ ಜವಾಬ್ದಾರಿ ಹಂಚಿಕೆ ಕುರಿತು ಬಸವ ಭವನದಲ್ಲಿ ಮತ್ತೊಂದು ಸಭೆ ನಡೆಸಲಿದ್ದೇವೆಂದು ಹೇಳಿದರು.

ಬಸವ ಸಮಿತಿಯ ಪದಾಧಿಕಾರಿ ರಾಮನಗೌಡ ಪಾಟೀಲ್ ಮಾತನಾಡಿ, ಬಸವ ಜಯಂತಿ ಸೇರಿ ಬಸವ ತತ್ವ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸಲು 5ಲಕ್ಷ ರೂ.ಗಳ ಅನುದಾನ ನೀಡಲು ಸರ್ಕಾರಕ್ಕೆ ತಾಲೂಕು ಆಡಳಿತ ಶಿಫಾರಸು ಮಾಡಬೇಕಿದೆ. ವಿವಿಧ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಕಡ್ಡಾಯಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ. ಬಹುತೇಕ ಕಚೇರಿಗಳಲ್ಲಿ ಭಾವಚಿತ್ರಗಳ ಕೊರತೆ ಎದ್ದು ಕಾಣುತ್ತಿದೆ. ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಕಚೇರಿಗಳಲ್ಲಿಯೂ ಭಾವಚಿತ್ರ ಇರುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಬೇಕೆಂದರು.

ತಹಸೀಲ್ದಾರ್ ಅಶೋಕ ಶಿಗ್ಗಾವಿ, ಬಸವ ಸಮಿತಿ ಅಧ್ಯಕ್ಷ ಎಸ್.ಪಿ.ಬಿಜಕಲ್, ಪಂಚಮಸಾಲಿ ಸಮುದಾಯ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಉಮಾಪತಿ ಅಕ್ಕಿ, ವಕೀಲ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ್,

ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಹೇಶ ಹಡಪದ್, ಪ್ರಮುಖರಾದ ಸಿದ್ರಾಮಪ್ಪ ವಂದಾಲಿ, ಅಡಿವೆಪ್ಪ ನೆರೆಬೆಂಚಿ, ನಬಿಸಾಬ ಕುಷ್ಟಗಿ, ನಿಂಗಪ್ಪ ಮಂಗಳೂರು, ರಾಮಣ್ಣ ಕುಲಕರ್ಣಿ, ಎಂ.ಎಂ.ಮಹಾಲಿಂಗಪುರ, ಜಿ.ಡಿ.ಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ಸಿಡಿಪಿಒ ಯಲ್ಲಮ್ಮ ಹಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net