ಬಹುಮುಖ ಪ್ರತಿಭೆಯಾಗಿದ್ದ ಯಲ್ಲಪ್ಪ ಸಂಕಲ್

07DVD 04
Published on

ದೇವದುರ್ಗ: ಗಬ್ಬೂರು ಗ್ರಾಮದ ಜಾನಪದ ಕಲಾವಿದ ಯಲ್ಲಪ್ಪ ಮಾಸ್ಟರ್ ಸಂಕಲ್ಗೆ ಪಟ್ಟಣದ ಶಾಂತಿನಗರಲ್ಲಿ ಹಗಲುವೇಷ ಸಾಂಸ್ಕೃತಿಕ ವೇದಿಕೆ ಹಾಗೂ ಕಸಾಪದಿಂದ ಭಾನುವಾರ ನುಡಿನಮನ ಸಲ್ಲಿಸಲಾಯಿತು.

ಹಗಲುವೇಷ ಸಾಂಸ್ಕೃತಿಕ ವೇದಿಕೆ ಸಂಚಾಲಕ ಈರಣ್ಣ ರುದ್ರಾಕ್ಷಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಯಲ್ಲಪ್ಪ ಮಾಸ್ಟರ್ ಸಂಕಲ್ ಜಾನಪದ ಸಾಂಸ್ಕೃತಿಕ ಬಹುಮುಖ ಪ್ರತಿಭೆಯಾಗಿದ್ದರು. ಅನೇಕ ಬಯಲಾಟಗಳಲ್ಲಿ ಸಾಮಾಜಿಕ, ಐತಿಹಾಸಿಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ತಬಲ, ವೀಣೆ, ಪಿಟೀಲು ಸೇರಿ ಅನೇಕ ವಾದ್ಯಗಳನ್ನು ನುಡಿಸುತ್ತಿದ್ದರು. ಜಾನಪದ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಮಾತನಾಡಿ, ಯಲ್ಲಪ್ಪ ಸಂಕಲ್ಗೆ ರಾಯಚೂರು ಜಿಲ್ಲಾ ಯುವ ಜನ ಮೇಳ, ಗಿರಿ ಜನ ಉತ್ಸವ ಪ್ರಶಸ್ತಿ ಲಭಿಸಿದೆ. ಬೆಳಗಾವಿಯಲ್ಲಿ 2011ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುರಸ್ಕಾರ ನೀಡಲಾಗಿತ್ತು. ಇಂತಹ ಅದ್ಭುತ ಜಾನಪದ ಕಲಾವಿದರ ಅಗಲಿಕೆಯಿಂದ ಬಯಲಾಟ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net