

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ನಗರದ ಗೊಲ್ಲರ ಕಾಲನಿ, ಮೇದಾರ ಓಣಿ ಸೇರಿ ಇತರ ಪ್ರದೇಶಗಳಲ್ಲಿನ ಮನೆಗಳಿಗೆ ಸೋಮವಾರ ಭೇಟಿ ನೀಡಿ ಮತದಾರರಿಗೆ ವಿತರಿಸಿದ ವೋಟರ್ ಸ್ಲಿಪ್ ಮಾಹಿತಿ ಪಡೆದುಕೊಂಡರು.
ಮನೆಗಳಲ್ಲಿನ ವೋಟರ್ ಸ್ಲಿಪ್ ಪರಿಶೀಲಿಸಿ ಮಾತನಾಡಿದ ದಿವ್ಯ ಪ್ರಭು, ಯಾವುದೇ ಭಯ, ಆತಂಕಗಳಿಲ್ಲದೆ ಮುಕ್ತವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ರಿಂದ 19 ವರ್ಷದೊಳಗಿನ ನವ ಯುವ ಮತದಾರರಿಗೆ ವೋಟರ್ ಸ್ಲಿಪ್ದೊಂದಿಗೆ ಜಿಲ್ಲಾ ಚುನಾವಣಾ-ಕಾರಿಗಳಿಂದ (ಲೇಟರ್ ಹೆಡ್ ಮೇಲೆ) ವಿಶೇಷವಾಗಿ ಶುಭಾಶಯ ಪತ್ರ ತಲುಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಿ, ನವ ಮತದಾರರನ್ನು ಮತದಾನಕ್ಕೆ ಬರುವಂತೆ ಪ್ರೇರಣೆ ನೀಡಿದರು.
ನಂತರ ಮತಗಟ್ಟೆ ಮಟ್ಟದ ಅಧಿಕಾರಿಗಳು, ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಮತದಾರನಿಗೆ ವೋಟರ್ ಸ್ಲಿಪ್, ಮತದಾನ ಮಾಹಿತಿ ಇರುವ ವೋಟರ್ ಗೈಡ್ ವಿತರಿಸಿದ ಕುರಿತು ಮಾಹಿತಿ ಪಡೆದರು.
ಸಹಾಯಕ ಮತದಾರ ನೋಂದಣಿ ಅಧಿಕಾರಿ ಡಾ.ಡಿ.ಎಚ್.ಹೂಗಾರ, ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ, ಮತಗಟ್ಟೆ ಮಟ್ಟದ ಅಧಿಕಾರಿಗಳಾದ ನಿರ್ಮಲಾ ಲಕ್ಕುಂಡಿ, ದ್ರಾಾಯಣಿ ಹಡಗಲಿ, ಉಮಾ ಮುಳ್ಳಮ್ಮ, ಇತರರು ಇದ್ದರು.