ಭಕ್ತಿಗಳಲ್ಲಿ ನವವಿಧಗಳಿವೆ: ಕೃಷ್ಣೇಗೌಡ್ರ ಕೋಲೂರ

24GDG01
ಗದಗ ವಿರೇಶ್ವರ ಪುಣ್ಯಾಶ್ರದಲ್ಲಿ ನಡೆಯುತ್ತಿರುವ ಕೈವಲ್ಯ ಪದ್ಧತಿ ಶಿವಯೋಗ ಕಾರ್ಯಕ್ರಮದಲ್ಲಿ ಕೃಷ್ಣೇಗೌಡ ಕೋಲೂರು ಶ್ರೀಗಳು ಮಾನತನಾಡಿದರು. ಅಭಿನವ ಪಂಚಾಕ್ಷರ ಶ್ರೀಗಳು, ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನ್ನವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಗುರುದೇವತೆಯಲ್ಲಿ ಅನುರಾಗದಿಂದ ಇರುವುದೇ ಭಕ್ತಿ. ರಾಗವೆಂದರೆ ಪ್ರೀತಿ. ಈ ಪ್ರೀತಿ ಸ್ತ್ರೀಯಲ್ಲಿ ಇದ್ದರೆ ಕಾಮವೆನಿಸುವುದು, ಪುತ್ರರ ಮೇಲಿದ್ದರೆ ಮೋಹವೆನಿಸುವುದು. ಧನಕನಕಾದಿಗಳಲ್ಲಿ ಇದ್ದರೆ ಲೋಭ ಎನಿಸುವುದು. ಪ್ರೀತಿ ಗುರು ದೇವತೆಗಳಲ್ಲಿ ಇರುವುದರಿಂದ ಭಕ್ತಿ ಎನಿಸುತ್ತದೆ. ಅಂತೆಯೇ ತುಳಸಿದಾಸರು ಭಕ್ತರು ಎನಿಸಿಕೊಂಡರು ಎಂದು ರನ್ನಬೆಳಗಲಿಯ ಸಿದ್ದಾರೂಡ ಮಠ ಶಂಭುಲಿಂಗಾಶ್ರಮದ ಪೂಜ್ಯ ಕೃಷ್ಣೇಗೌಡ್ರ ಕೋಲೂರ ಅವರು ಹೇಳಿದರು
ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾರಿ ಗವಾಯಿಗಳವರ 80ನೇ ಹಾಗೂ ಪುಟ್ಟರಾಜ ಕವಿ ಗವಾಯಿಗಳವರ 14ನೇ ಸ್ಮರಣೋತ್ಸವದ ಅಂಗವಾಗಿ ನಡೆಯುತ್ತಿರುವ ಕೈವಲ್ಯ ಪದ್ಧತಿ ಶಿವಯೋಗ ಶಿವಾನುಭವದಲ್ಲಿ ಭಾಗವಹಿಸಿ ಮಾತನಾಡಿದರು. ಭಕ್ತಿ ದೃಢವಾಗಿರಬೇಕು. ನಿಜಗುಣರು ಅನುಪಮಾಚಲ ಭಕ್ತಿ ಭಾವಾನುಕೂಲವೇ ಶಂಭುಲಿಂಗವೆಂದು ಹೇಳಿದ್ದಾರೆ ಎಂದರು.
ಕರಿಕಟ್ಟಿಯ ಕುಮಾರಶಾಸ್ತ್ರಿಗಳು ಹಿರೇಮಠ ಮಾತನಾಡಿ, ದೇವತೆಗಳ ಮೇಲೆ ದೃಢವಾದ ಪ್ರೀತಿ ವ್ಯಕ್ತ ಮಾಡುವ ರೀತಿಗಳಿಗೆ ನವವಿಧ ಭಕ್ತಿ ಎಂದು ಕರೆಯುತ್ತಾರೆ. ಅವುಗಳಲ್ಲಿ ಶ್ರವಣಂ, ಪರೀತ ಕೀರ್ತನಂ ಸೇರಿದಂತೆ ವಿವಿಧ ರೀತಿಯ ಭಕ್ತಿಗಳಿವೆ ಎಂದರು.
ಅಡ್ನೂರ ದಾಸೋಹ ಮಠದ ಅಭಿನವ ಪಂಚಾರ ಶಿವಾಚಾರ್ಯ ಮಹಾಸ್ವಾಮಿಗಳು, ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net