ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ನಲ್ಲಿ ವೇಣುಗೋಪಾಲ್​ಗೆ ಚಿನ್ನದ ಪದಕ

devnalli
Published on

ದೇವನಹಳ್ಳಿ: ದುಬೈ ಸರ್ಕಾರ ಹಾಗೂ ಸ್ಪೋರ್ಟ್ಸ್​ ಕೌನ್ಸಿಲ್​ ಅನುಮೊದನೆಯೊಂದಿಗೆ ಸಂಯುಕ್ತ ಭಾರತೀಯ ಕೇಲ್​ ಫೌಂಡೇಷನ್​ನಿಂದ (ಎಸ್​ಬಿಕೆಎಫ್​) ದುಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ 11ನೇ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್​ 45 ಪ್ಲಸ್​ ಸಿಂಗಲ್ಸ್​ನ ವಿಭಾಗದಲ್ಲಿ ದೇವನಹಳ್ಳಿಯ ಡಿ.ಎಂ.ವೇಣುಗೋಪಾಲ್​ ಚಿನ್ನದ ಪದಕ ಪಡೆದಿದ್ದಾರೆ.

45 ಪ್ಲಸ್​ ಡಬಲ್ಸ್​ ವಿಭಾಗದಲ್ಲಿ ದೇವನಹಳ್ಳಿಯ ಶ್ರೀವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಸದಸ್ಯ ಡಿ.ಎಂ.ವೇಣುಗೋಪಾಲ್​ ಮತ್ತು ಕೋಲಾರದ ಶ್ರೀನಿವಾಸ್​ ದ್ವೀತಿಯ ಸ್ಥಾನ ಮತ್ತು ದೇವನಹಳ್ಳಿ ಸದ್ರುಹುಸೇನ್​ ಹಾಗೂ ತುಮಕೂರಿನ ಪುಟ್ಟಸ್ವಾಮಿ ಅವರು 65 ಪ್ಲಸ್​ ಡಬಲ್​ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

ಈ ಕ್ರೀಡಾಕೂಟದಲ್ಲಿ ಭಾರತ ಒಳಗೊಂಡಂತೆ ಶ್ರೀಲಂಕಾ, ದುಬೈ, ನೈಜೀರಿಯಾ, ಪಾಕಿಸ್ತಾನ, ನೇಪಾಳ ದೇಶಗಳು ಭಾಗವಹಿಸಿದ್ದು, ವೇಣುಗೋಪಾಲ್​ ಒಂದು ಚಿನ್ನ ಹಾಗೂ ಸದ್ರುಹುಸೇನ್​ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net