ವೇಣುಗೋಪಾಲ ಕಾಲನಿ ವಾರ್ಷಿಕೋತ್ಸವ

New Project (69)
Published on

ಮೂಡುಬಿದಿರೆ: ಕೊಡಂಗಲ್ಲಿನ ವೇಣುಗೋಪಾಲ ಕಾಲನಿ ವೆಲ್‌ಫೇರ್ ಅಸೋಸಿಯೇಶನ್‌ನ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್ ಮತ್ತು ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ಅವರನ್ನು ಸನ್ಮಾನಿಸಲಾಯಿತು. ಶ್ರೇಯಾ ಶೆಟ್ಟಿ ಮತ್ತು ಅನನ್ಯಾ ಅವರನ್ನು ಗೌರವಿಸಲಾಯಿತು.

ಜಯಶ್ರೀ ಕೇಶವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲನಿಗೆ ಬೇಕಾದ ಸೌಕರ್ಯವನ್ನು ಪುರಸಭೆ ವತಿಯಿಂದ ವಾಡಿಕೊಡುವುದಾಗಿ ಭರವಸೆಯಿತ್ತರು.

ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಪ್ರಸಾದ್ ಕುವಾರ್ ಅತಿಥಿಗಳಾಗಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ರಾಜೇಶ್ ಶೆಣೈ, ಕಾರ್ಯದರ್ಶಿ ಮೋಹನ ಚಂದ್ರ ಮತ್ತು ಕಾಲನಿಯ ನಿವಾಸಿಗಳು ಉಪಸ್ಥಿತರಿದ್ದರು.

ಸಂದ ಸದಸ್ಯ ವೆಂಕಟೇಶ್ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ಗೋಪಾಲ ಮೊಯ್ಲಿ ವಂದಿಸಿದರು. ಬಹುಮಾನ ಪಟ್ಟಿಯನ್ನು ವೃಂದಾ ವಾಚಿಸಿದರು ಮತ್ತು ಹರೀಶ್ ಸನ್ಮಾನಿತರ ಪರಿಚಯಿಸಿದರು. ಜಯರಾಮ ಆಳ್ವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net