ಸಂಸ್ಕೃತ ಭಾರತಿ ಮಂಗಳೂರು ನಗರ ಅಧ್ಯಕ್ಷರಾಗಿ ಡಾ. ವೇಣುಗೋಪಾಲ್ ಭಟ್

mng-20apri-venugopal bhat
Published on



ಮಂಗಳೂರು : ಸಂಸ್ಕೃತ ಭಾರತಿಯ ಮಂಗಳೂರು ನಗರ ಅಧ್ಯಕ್ಷರಾಗಿ ಡಾ. ವೇಣುಗೋಪಾಲ್ ಭಟ್ ನೇಮಕವಾಗಿದ್ದಾರೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷರಾಗಿರುವ ಇವರು ಸಂಸ್ಕೃತ ಕೋವಿದ ಹಾಗೂ ಎಂ.ಎ. ಪದವೀಧರರಾಗಿದ್ದಾರೆ.
ಸಂಸ್ಕೃತ ಭಾರತಿಯ ನಗರ ಸಂಯೋಜಕಿಯಾಗಿ ಸಂಧ್ಯಾ ಕಾಮತ್, ಪ್ರಶಿಕ್ಷಣ ಪ್ರಮುಖರಾಗಿ ಗಜಾನನ ಬೋವಿಕಾನ, ಬಾಲಕೇಂದ್ರ ಪ್ರಮುಖರಾಗಿ ಗಣಪತಿ ಕಾಮತ್, ವಿಭಾಗ ವಿದ್ಯಾಲಯೇಶು ಸಂಸ್ಕೃತಂ ಪ್ರಮುಖರಾಗಿ ಎಂ.ಆರ್. ವಾಸುದೇವ ರಾವ್, ವಿಭಾಗ ಪ್ರಶಿಕ್ಷಣ ಪ್ರಮುಖರಾಗಿ ವೆಂಕಟೇಶ್ ಕುಮಾರ್ ಬಾಳಿಲ ನೇಮಕವಾಗಿದ್ದಾರೆ ಎಂದು ಸಂಸ್ಕೃತ ಭಾರತಿ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ ಸತ್ಯನಾರಾಯಣ ಕೆ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net