ಜಾನಪದ ಕ್ಷೇತ್ರಕ್ಕೆ ಕಂಬಳದ ಕೊಡುಗೆ: ಡಾ.ಪದ್ಮಪ್ರಸಾದ್ ಅಜಿಲ

kambala
Published on

ಬೆಳ್ತಂಗಡಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಶನಿವಾರ ಉದ್ಘಾಟನೆಗೊಂಡಿತು.

ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಕಂಬಳ ಉದ್ಘಾಟಿಸಿ ಮಾತನಾಡಿ, ಜಾನಪದ ಕ್ಷೇತ್ರಕ್ಕೆ ಕಂಬಳದ ಕೊಡುಗೆ ಅಪಾರ. ಕಾಂತಾರ ಸಿನಿಮಾ ಬಳಿಕ ದೈವರಾಧನೆ ಮತ್ತು ತುಳುನಾಡಿನ ಆಚರಣೆಗಳಿಗೆ ಮತ್ತಷ್ಟು ಮಹತ್ವ ಬಂದಿರುವುದು ಸಂತಸದ ವಿಚಾರ ಎಂದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಎನ್.ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಿದ್ದರು. ಎಂ.ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಆರಿಗ ಪೆರ್ಮಾಣುಗುತ್ತು, ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಕೆ.ಎಂ.ಹನೀಫ್ ಸಖಾಫಿ, ಪಡಂಗಡಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ರಾಜಕೀರ್ತಿ ಜೈನ್ ಮೇಗಿನ ಕುಕ್ಕೇಡಿ, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಪೂಜಾರಿ ಬಿಕ್ರೊಟ್ಟು, ತಾಪಂ ಮಾಜಿ ಸದಸ್ಯೆ ವಿನುತಾ ಪ್ರಕಾಶ್, ಪ್ರಮುಖರಾದ ಲಕ್ಷ್ಮಣ ಪೂಜಾರಿ ಹೇಡ್ಮೆ, ಭಾಸ್ಕರ ಬಲ್ಯಾಯ, ಉದ್ಯಮಿ ರಾಜೇಶ್ ದ್ರುವಿ, ಕಂಬಳ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ವಿ.ಪ್ರಭಾಕರ ಹೆಗ್ಡೆ ಹಟ್ಟಾಜೆ, ಗಣೇಶ್ ನಾರಾಯಣ ಪಂಡಿತ್, ನವೀನ್ ಪೂಜಾರಿ ಪಚ್ಚೇರಿ, ಕೃಷ್ಣಪ್ಪ ಪೂಜಾರಿ, ಡಾ.ಪ್ರತೀತ್ ಅಜಿಲ, ನಿಶ್ಮಿತಾ ರಾಜೇಶ್, ನಾರಾಯಣ ಪೂಜಾರಿ ಆಲಡ್ಕ, ಗ್ರಾಪಂ ಸದಸ್ಯರಾದ ಗುಣವತಿ ಡಿ., ತೇಜಾಕ್ಷಿ, ವಕೀಲ ಸತೀಶ್ ಪಿ.ಎನ್., ಲೋಕೇಶ್ ಪೂಜಾರಿ ಕೋರ್ಲೋಡಿ, ಕಂಬಳ ಸಮಿತಿಯ ಉಪಾಧ್ಯಕ್ಷರಾದ ಕರುಣಾಕರ ಸಾಲ್ಯಾನ್, ಸ್ಟೀವನ್ ಮೋನಿಸ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ಮತ್ತಿತರರು ಉಪಸ್ಥಿತರಿದ್ದರು.

ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು.

ಕೋಣಗಳನ್ನು ಬಿಡುವ ಗಂತಿನಲ್ಲಿ ಸಮಯ ವ್ಯರ್ಥ ಸಲ್ಲದು. ಮಂಜೊಟ್ಟಿಯಲ್ಲಿ ಸೆನ್ಸರ್‌ಲೈಟ್ ಮೂಲಕ ಸ್ಪರ್ಧೆ ಫಲಿತಾಂಶವನ್ನು ನಿರ್ಣಯಿಸುವಂತೆ ಗಂತಿನಲ್ಲೂ ಕೋಣಗಳನ್ನು ಬಿಡಲು ಸೆನ್ಸರ್‌ಲೈಟ್ ಅಳವಡಿಸಬೇಕು. ಡಾ.ಪದ್ಮಪ್ರಸಾದ್ ಅಜಿಲ, ಅಳದಂಗಡಿ ಅರಮನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net