ವೆಂಕಟೇಶ್ವರ ದೇವಸ್ಥಾನದಲ್ಲಿ ರಥೋತ್ಸವ

24 Sirwar 1
Published on

ಸಿರವಾರ: ಪಟ್ಟಣದ ಪುರಾತನ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ರಥೋತ್ಸವ ಜರುಗಿತು.

ನವರಾತ್ರಿ ನಿಮಿತ್ತ ನಿತ್ಯ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಸೇವೆ ಹಾಗೂ ರಾತ್ರಿ ಭಜನೆ, ತೊಟ್ಟಿಲು ಸೇವೆ, ಪಲ್ಲಕ್ಕಿ ಸೇವೆ ನಡೆದವು. ಮಂಗಳವಾರ ಕಲ್ಯಾಣೋತ್ಸವ ಹಾಗೂ ರಥೋತ್ಸವ ಜರುಗಿತು. ಪುರೋಹಿತ ಯಲಗುರ್ದಾಚಾರ್ ಜೋಷಿ ಅವರಿಂದ ಪೂಜಾ ಕೈಂಕರ್ಯಗಳ ನಡೆದವು.

ಈಶ್ವರ ದೇವಸ್ಥಾನದ ಅರ್ಚಕ ನಿಂಬಯ್ಯಸ್ವಾಮಿ, ಪ್ರಮುಖರಾದ ವಾದಿರಾಜ್ ಕುಲಕರ್ಣಿ, ನರಸಿಂಹಾಚಾರ್ ಜೋಷಿ, ಶ್ರೀನಿವಾಸ ಆಚಾರ್, ಕುಪ್ಪಾಚಾರಿ, ಪರಮೇಶ ಶೆಟ್ಟಿ, ವಸುಧೇಂದ್ರ, ವಿಷ್ಣುತೀರ್ಥ, ಕೃಷ್ಣಾಜಿರಾವ್ ಸೂರ್ಯವಂಶಿ, ಗಿರಿರಾವ್ ಗುಂಜಳ್ಳಿ, ಹನುಮಂತರಾವ್ ಕಾನಿಹಾಳ, ಗೋಪಾಲದಾಸ್, ಅಮರೇಶ ನಂದರೆಡ್ಡಿ, ರಮೇಶ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net