

ಹೊಳೆನರಸೀಪುರ: ಪಟ್ಟಣದ ಉಪ್ಪಾರರ ಬಡಾವಣೆಯ ಶ್ರೀ ರಾಯರಾವುತರ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಏಳನೇ ವರ್ಷದ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಬುಧವಾರ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ನೈವೇದ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅರ್ಚಕರಾದ ಗುರುಪ್ರಸಾದ್ ಹಾಗೂ ಅಚ್ಚುತಾ ಪೂಜಾ ಕೈಂಕರ್ಯ ನೆರವೇರಿಸಿದರು.
ಹಿರಿಯರಾದ ರಂಗಸ್ವಾಮಿ, ಶಾಂತಮ್ಮ, ಅಖಿಲ ಕರ್ನಾಟಕ ರಾಯ ರಾವುತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ರೇಖಾ, ಕಾರ್ಯದರ್ಶಿ ಶೇಖರ್, ಖಜಾಂಚಿ ಪಂಕಜಾ, ಎಚ್.ಆರ್.ಶೇಖರ್, ಬಸವರಾಜು, ಹರೀಶ್, ರಾಘವೇಂದ್ರ, ಶಿವಣ್ಣ, ಮಹದೇವ, ವರದರಾಜು, ಸ್ವಾಮಿ, ವೇಣುಗೋಪಾಲ್ ಸಿ.ಬಿ., ಪುಟ್ಟಗೌರಮ್ಮ, ಅಶ್ವಿನಿ, ವೇದಾವತಿ, ಸರಸ್ಪತಿ, ವೇಣುಗೋಪಾಲ್, ಗೀತಾ, ಯಶವಂತ್, ವಿನಯ್, ಪ್ರೀತಮ್, ಅಡುಗೆ ಭಟ್ಟ ಕುಮಾರ್, ಇತರರು ಇದ್ದರು.