ಸಾಹಿತಿ ಡಾ. ಬಸವರಾಜ ಜಗಜಂಪಿ ಅಭಿಮತ; ಪ್ರವಾಸ ಒತ್ತಡದ ಬದುಕಿಗೆ ವಿಶ್ರಾಂತಿ

12 Dwd 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶ ನೋಡಿ ಕೋಶ ಓದಬೇಕು. ಪ್ರವಾಸ ಕರೆದು ತೋರಿಸಿದರೆ, ಪುಸ್ತಕ ತೆರೆದು ತೋರಿಸುತ್ತದೆ. ಪ್ರವಾಸ ಒತ್ತಡದ ಬದುಕಿಗೆ ವಿಶ್ರಾಂತಿ ನೀಡುತ್ತದೆ. ಯಾರು ಪ್ರವಾಸ ಮಾಡುವುದಿಲ್ಲವೋ ಅವರಿಗೆ ಸುಖವಿಲ್ಲ ಎಂದು ಬೆಳಗಾವಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೆಂಕಟೇಶ ಮಾಚಕನೂರ ಅವರ `ಕೈಲಾಸ ಮಾನಸ', ಅಪೂರ್ವ ಪೂರ್ವ, ಉತ್ಕಲ ವಂಗ, ಗಾಂಽ ಕೃಷ್ಣರ ನಾಡಿನಲ್ಲಿ, ಮರಳುಗಾಡಿನ ಬೆಡಗು ಹಾಗೂ ಏಕ ಅನೇಕ(ಸಮಗ್ರ ಪ್ರಬಂಧಗಳು) ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾಚಕನೂರ ಅವರು ಪ್ರವಾಸ ಮಾಡಿ ಅದರ ಅನುಭವವನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಡುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದವರು. ಪ್ರವಾಸ ಕಥನವನ್ನು ನೋಡುವ ಸೌಂದರ್ಯ ಪ್ರಜ್ಞೆ ಇರಬೇಕು. ಸೃಜನಶೀಲತೆ ಬೇಕು. ಇತಿಹಾಸದ ಅರಿವು ಇರಬೇಕು. ಪ್ರವಾಸ ಕಥನ ಕಲಿಸುವ ಪ್ರಾಧ್ಯಾಪಕರು ರಸಿಕರಿರಬೇಕು. ಇತಿಹಾಸದ ಜ್ಞಾನವಿರಬೇಕು ಎಂದರು.
ಸಾಹಿತಿ ಡಾ. ಎಂ.ಬಿ. ಹೂಗಾರ ಪ್ರಬಂಧಗಳ ಕುರಿತು ಮಾತನಾಡಿ, ಸಮರ್ಥ ಲೇಖಕ ಹೊಸ ಪದಗಳನ್ನು ಸೃಷ್ಟಿಸುತ್ತಾನೆ. ಬರವಣಿಗೆಯನ್ನು ವಿಶಿಷ್ಟ ರೀತಿಯಲ್ಲಿ ಬಳಸಿಕೊಳ್ಳುವುದು, ಲಘು ಪ್ರಬಂಧಗಳಲ್ಲಿ ಕಾವ್ಯಾತ್ಮಕ ಬಳುಸುವುದು ಪ್ರಭುದ್ಧತೆಯಾಗಿದೆ. ಈ ದಿಶೆಯಲ್ಲಿ ಮಾಚಕನೂರ ಅವರು ಯಶಸ್ವಿ ಲೇಖಕರಾಗಿದ್ದಾರೆ ಎಂದರು.
ಸAಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ವೇದಿಕೆಯಲ್ಲಿದ್ದರು. ಶಂಕರ ಹಲಗತ್ತಿ ನಿರ್ವಹಿಸಿದರು. ಸತೀಶ ತುರಮರಿ, ಶ್ರೀನಿವಾಸ ವಾಡಪ್ಪಿ, ಪ್ರಿ. ಶಶಿಧರ ತೋಡಕರ, ಪಿ.ಸಿ. ಹಳ್ಯಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net