

ಶಿವಮೊಗ್ಗ: ಕುವೆಂಪು ವಿವಿ ಪ್ರಭಾರ ಕುಲಪತಿಯಾಗಿ ಪ್ರೊ. ಎಸ್.ವೆಂಕಟೇಶ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶಿಸಿದ್ದಾರೆ. ಪ್ರೊ.ಎಸ್.ವೆಂಕಟೇಶ್ ಪ್ರಸ್ತುತ ಕುವೆಂಪು ವಿವಿ ವಾಣಿಜ್ಯ ನಿಕಾಯದ ಡೀನ್ ಹಾಗೂ ವಾಣಿಜ್ಯಶಾಸö ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಎರಡು ದಶಕಗಳಿಗೂ ಅಽಕ ಕಾಲ ಅಧ್ಯಾಪಕರಾಗಿ ಅನುಭವ ಹೊಂದಿದ್ದಾರೆ. ಬುಧವಾರ ಪ್ರಭಾರ ಕುಲಪತಿಯಾಗಿ ಅಽಕಾರ ಸ್ವೀಕರಿಸಿದ್ದಾರೆ. ಕುಲಪತಿಯಾಗಿದ್ದ ಪ್ರೊ.ಬಿ.ಪಿ.ವೀರಭದ್ರಪ್ಪ ಅವಽ ಮುಕ್ತಾಯವಾದ ಬಳಿಕ ನೂತನ ಕುಲಪತಿಗಳ ನೇಮಕಕ್ಕೆ ಅನೇಕ ಪ್ರಕ್ರಿಯೆಗಳು ನಡೆಯಬೇಕಿದ್ದು ಇದಕ್ಕೆ ಕಾಲಾವಕಾಶದ ಅವಶ್ಯಕತೆಯಿದೆ. ವಿವಿಯ ಕಾರ್ಯ ಚಟುವಟಿಕೆಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಪ್ರೊ.ಎಸ್.ವೆಂಕಟೇಶ್ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಕ ಮಾಡುತ್ತಿರುವುದಾಗಿ ರಾಜ್ಯಪಾಲರು ಆದೇಶದಲ್ಲಿ ತಿಳಿಸಿದ್ದಾರೆ.