ಮಾರ್ಗೋನಹಳ್ಳಿ ಡೇರಿಗೆ ವೆಂಕಟೇಶ್ ಅಧ್ಯಕ್ಷ

26-kkr1(2-24
Published on

ಕಿಕ್ಕೇರಿ: ಹೋಬಳಿಯ ಮಾರ್ಗೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವೆಂಕಟೇಶ್, ಉಪಾಧ್ಯಕ್ಷರಾಗಿ ಚಲುವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಚಲುವಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಸಹಕಾರ ಸಂಘದ ಉಪನಿಬಂಧಕ ಹಾಗೂ ಚನಾವಣಾಧಿಕಾರಿ ಭರತ್‌ಕುಮಾರ್ ಘೋಷಣೆ ಮಾಡಿದರು.


ಗ್ರಾಮ ಮುಖಂಡರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಿಹಿ ತಿನಿಸಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ನಿರ್ದೇಶಕರಾದ ನರಸಿಂಹ, ರಮೇಶ್, ಮಂಜೇಗೌಡ, ಗಿರೀಶ್, ಶಿವೇಗೌಡ, ದೇವರಾಜು, ಯಶೋದಮ್ಮ, ಲಲಿತಮ್ಮ, ಮುಖಂಡರಾದ ಪುಟ್ಟೇಗೌಡ, ನರಸೇಗೌಡ, ರಾಜಣ್ಣ, ಅಜ್ಜೇಗೌಡ, ಗೋವಿಂದ, ಮಂಜೇಗೌಡ, ಪಾಪೇಗೌಡ, ಮಂಜುನಾಥ್, ಗಿರೀಶ್, ಶಂಕರ್, ಕಾರ್ಯದರ್ಶಿ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net