ಅಧ್ಯಕ್ಷರಾಗಿ ವೆಂಕಟೇಶ ಆಯ್ಕೆ

22 vikram 4 (venkatesh Hattiyavar)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ರೆವೆನ್ಯೂ ಕ್ಲಬ್​ ಆವರಣದಲ್ಲಿ ಜರುಗಿದ ಜಿಲ್ಲಾ ಕಂದಾಯ ನೌಕರರ ಸಭೆಯಲ್ಲಿ ಅಮ್ಮಿನಭಾವಿ ಗ್ರಾಮ ಆಡಳಿತ ಅಧಿಕಾರಿ ವೆಂಕಟೇಶ ಹಟ್ಟಿಯವರ ಅವರನ್ನು ಕರ್ನಾಟಕ ರಾಜ್ಯ ಕಂದಾಯ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಹಾಗೂ ಧಾರವಾಡ ತಹಸೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಚಿನ ಮಾಳಗಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಖಜಾಂಚಿ ನಾಸಿರ ಅಮರಗೋಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ನೌಕರರ ಕುಂದುಕೊರತೆ, ಇತರ ವಿಷಯಗಳ ಕುರಿತು ಚಚಿರ್ಸಲಾಯಿತು. ನಂತರ ರಾಜೀನಾಮೆ, ವಿವಿಧ ಕಾರಣದಿಂದ ಖಾಲಿಯಾಗಿದ್ದ ಸಂಘದ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ವೆಂಕಟೇಶ ಹಟ್ಟಿಯವರ, ಕಾರ್ಯದರ್ಶಿಯಾಗಿ ಸಚಿನ ಮಾಳಗಿ ಅವರನ್ನು ಆಯ್ಕೆ ಮಾಡಲಾಯಿತು. ಹಿಂದಿನ ಅವಧಿಗೆ ಅಧ್ಯಕ್ಷರಾಗಿದ್ದ ಉಪ ವಿಭಾಗಾಧಿಕಾರಿ ಕಚೇರಿ ಶಿರಸ್ತೇದಾರ ರವಿ ಕಟ್ಟಿ ಅವರನ್ನು ಗೌರವಾಧ್ಯಕ್ಷರಾಗಿ ನೇಮಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಘಟಕದ ನಿರ್ದೇಶಕರಾದ ಮಲ್ಲಿಕಾರ್ಜುನ ಸೊಲಗಿ, ಮಹೇಶ ನಾಗಮ್ಮನವರ, ಸಂಘದ ತಾಲೂಕು ಅಧ್ಯಕ್ಷರಾದ ರಮೇಶ ಬಂಡಿ, ಅಶೋಕ ಮಲ್ಲೂರ, ಯಲ್ಲಪ್ಪ ಸವದತ್ತಿ, ಸಂತೋಷ ಕನ್ನೂರ, ಜಿಲ್ಲಾ ಉಪಾಧ್ಯಕ್ಷ ಆನಂದ ನಾಯ್ಕ, ಪದಾಧಿಕಾರಿಗಳು, ಇತರರು ಭಾಗವಹಿಸಿದ್ದರು ಎಂದು ನಾಸೀರ್​ ಅಮರಗೋಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net