ನಾಡು ಒಗ್ಗೂಡಿಸಿದ ವೆಂಕಟರಾಯರು

Untitled-1
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಜಯಂತ್ಯುತ್ಸವ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಕಾರ್ಯಕಾರಣಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಕೆ.ಆರ್​.ರವಿಕಿರಣ್​, ಎ.ಎಸ್​. ಅಶ್ವತ್ಥಗೌಡ, ಕೋಶಾಧ್ಯಕ್ಷ ಡಾ.ಮುನಿರಾಜು, ಸಂಟನಾ ಕಾರ್ಯದರ್ಶಿ ರಾಜಟ್ಟ ರವಿ ಇದ್ದರು.
Published on

ದೊಡ್ಡಬಳ್ಳಾಪುರ : ಏಕೀಕರಣ ಚಳವಳಿ ಮೂಲಕ ಕರುನಾಡನ್ನು ಒಗ್ಗೂಡಿಸಿದವರು ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯ ಎಂದು ಹಿರಿಯ ಸಾಹಿತಿ ಶರಣಯ್ಯ ಹಿರೇಮಠ ಬಣ್ಣಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಆಲೂರು ವೆಂಕಟರಾಯರು ಜಯಂತ್ಯುತ್ಸವ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ಇತಿಹಾಸ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ, ಅಧ್ಯಯನಶೀಲರಾಗಿದ್ದ ವೆಂಕಟರಾಯ ಕನ್ನಡ ಸಾಹಿತಿಗಳಿಗೆ ಮತ್ತು ಅವರ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು ಎಂದರು.

ಜಯಕರ್ನಾಟಕ ಪತ್ರಿಕೆಯ ಮೂಲಕ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ.ಜೋಷಿ ಹೀಗೆ ಹಲವು ಸಾಹಿತಿಗಳಲ್ಲದೆ ನಾಡಿನ ಸಮಸ್ತ ಸಾಹಿತಿಗಳ ಸಾಹಿತ್ಯ ರಚನೆಗೆ ಸಹಕಾರ ನೀಡಿದರು. ವೆಂಕಟರಾಯ ಅವರು ಬಹುಮುಖ ಪ್ರತಿಭೆ. ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವರಿಗಿದ್ದ ಕಾಳಜಿ, ಕಾರ್ಯಪ್ರವೃತ್ತಿ ಅನನ್ಯವಾದದ್ದು. ಇದರಿಂದಾಗಿ ವೆಂಕಟರಾಯ ಅವರನ್ನು ಕರ್ನಾಟಕದ ಪ್ರಾಣೋಪಾಸಕರು ಎಂದು ವರಕವಿ ದ.ರಾ.ಬೇಂದ್ರೆ ಕರೆದಿದ್ದಾರೆ ಎಂದರು.

ಪ್ರತಿನಿಧಿ ರಮೇಶ್​ ಕುಮಾರ್​, ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷ ಬಿ.ಪ್ರಕಾಶಮೂರ್ತಿ, ಗೌರವ ಕಾರ್ಯದರ್ಶಿ ಭಾನುಪ್ರಕಾಶ್​, ದೊಡ್ಡಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್​, ಕೋಶಾಧ್ಯಕ್ಷ ಜಿ.ಸುರೇಶ್​, ಹೊಸಕೋಟೆ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ತಾವರೆಕೆರೆ ನಾಗರಾಜು, ಪ್ರತಿನಿಧಿಗಳಾದ ಮುನಿವೀರಪ್ಪ, ಮಾರ್ಕಂಡಪ್ಪ ಇತರರು ಇದ್ದರು.

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್​ ಸ್ಥಾಪನೆಯಲ್ಲಿ ವೆಂಕಟರಾಯ ಅವರು ಮಹತ್ವದ ಪಾತ್ರವಹಿಸಿದ್ದಾರೆ. ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸುವ ಮೂಲಕ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂದ ಚಟುವಟಿಕೆಗಳನ್ನು ವಿಸ್ತಾರಗೊಳಿಸಿದರು. ಕರ್ನಾಟಕ ಗತವೈಭವ ಸೇರಿ ಹಲವು ಮಹತ್ವದ ಕೃತಿಗಳನ್ನು ಆಲೂರು ವೆಂಕಟರಾಯರು ರಚಿಸಿದ್ದಾರೆ. ಏಕೀಕರಣ ಮತ್ತು ಸ್ವಾತಂತ್ರ$್ಯ ಹೋರಾಟ ಎರಡು ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. | ಪ್ರೊ.ಬಿ.ಎನ್​.ಕೃಷ್ಣಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net