

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಚೈತ್ರ ಶುದ್ಧ ಹುಣ್ಣಿಮೆ ಶನಿವಾರ ಶ್ರೀದೇವರಿಗೆ ಶತಕಲಶಾಭಿಷೇಕ ನಡೆಯಿತು. ಮುಂಜಾನೆ ಮಹಾಪ್ರಾರ್ಥನೆ, ಪಂಚಾಮೃತ ಸಹಿತ ಸೀಯಾಳಾಭಿಷೇಕ, ಮಧ್ಯಾಹ್ನ ಶತಕಲಶಾಭಿಶೇಕ, ಕನಕಾಭಿಷೇಕ, ಗಂಗಾಭಾಗೀರಥಿ ಅಭಿಷೇಕ, ಸಿಂಹಾಸನದಲ್ಲಿ ಅಷ್ಟ ಮಂಗಳ ನಿರೀಕ್ಷಣೆ, ಪಟ್ಟಕಾಣಿಕೆ, ಮಹಾ ನೈವೇದ್ಯ, ಮಹಾಮಂಗಳಾರತಿ, ದರ್ಶನ ಸೇವೆ, ಭೂರಿ ಸಮರಾಧನೆ, ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ದೇವದರ್ಶನ ಸಹಿತ ಚಂದ್ರಮಂಡಲ ಉತ್ಸವ, ವಸಂತ ಪೂಜೆ ನಡೆಯಿತು. ಶ್ರೀಕ್ಷೇತ್ರದ ಅರ್ಚಕವರ್ಗ, ಆಡಳಿತ ಮಂಡಳಿ, ಭಜಕ ವೃಂದ ಹಾಜರಿದ್ದರು.