ವೆಂಕಟರಮಣ ಸ್ವಾಮಿ ರಥೋತ್ಸವ ಸಂಪನ್ನ

Untitled-2
ವಿಜಯಪುರ ಬಲಿಜಪೇಟೆಯಲ್ಲಿ ನೆಲೆಸಿರುವ ಶ್ರೀ ಲಕ್ಷಿ$್ಮ ವೆಂಕಟರಮಣ ಸ್ವಾಮಿಯವರ 20 ನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವಕ್ಕೆ, ಪುರಸಭೆ ಅಧ್ಯೆ ಭವ್ಯಾ ಮಹೇಶ್​ ಚಾಲನೆ ನೀಡಿದರು. ಅಖಿಲ ಕರ್ನಾಟಕ ಬಲಿಜ ಸಂದ ಪ್ರಧಾನ ಕಾರ್ಯದರ್ಶಿ ಸಿ,ಕೆ.ಜಗದೀಶ್​, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಸತೀಶ್​ ಕುಮಾರ್​, ರಾಜೇಶ್ವರಿ ಭಾಸ್ಕರ್​, ಸದಸ್ಯರಾದ ಸಿ.ಎಂ.ರಾಮು, ಕೇಶವಪ್ಪ, ಮಂಜುಳಾ ಮುನಿರಾಜು, ಶ್ರೀರಾಮಯ್ಯ, ವಿಮಲಾ ಬಸವರಾಜು, ಹನೀಫುಲ್ಲಾ, ಚಿಕ್ಕನಹಳ್ಳಿ ವೆಂಕಟೇಶ್​ ಇದ್ದರು.
Published on

ವಿಜಯಪುರ : ಪಟ್ಟಣದ ಬಲಿಜಪೇಟೆಯಲ್ಲಿರುವ ಶ್ರೀ ಲಕ್ಷಿ$್ಮ ವೆಂಕಟರಮಣಸ್ವಾಮಿ 20ನೇ ಕಲ್ಲುಗಾಲಿ ಬ್ರಹ್ಮರಥೋತ್ಸವ, 65ನೇ ಅಖಂಡ ಶ್ರೀರಾಮನಾಮ ಸಪ್ತಾಹ ಅಪಾರ ಭಕ್ತ ಸಮೂಹದ ನಡುವೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಮೂರು ದಿನಗಳಿಂದಲೂ ಕಲ್ಯಾಣೋತ್ಸವ, ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ಬುಧವಾರ ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿದ್ದು, ಪೂಲಂಗಿ ಸೇವೆ, ಅಖಂಡ ರಾಮ ನಾಮ ಸಪ್ತಾಹ, ಪೂರ್ಣಾಹುತಿ, ಶ್ರೀಮತ್​ ಕಲ್ಯಾಣ ಮಹೋತ್ಸವದೊಂದಿಗೆ 20ನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವ ನೆರವೇರಿತು. ಇದರೊಂದಿಗೆ ಸದ್ಗುರು ಯೋಗಿನಾರೇಯಣ ಯತೀಂದ್ರರ 18ನೇ ಆರಾಧನಾ ಮಹೋತ್ಸವ, ಪಟ್ಟಣದ ಬಲಿಜ ಸಂದ 42ನೇ ವಾರ್ಷಿಕೋತ್ಸವ ನಡೆಯಿತು.

ಸಂಜೆ 4ಕ್ಕೆ ಶ್ರೀ ಲಕ್ಷಿ$್ಮ ವೆಂಕಟರಮಣ ಸ್ವಾಮಿ ಪ್ರತಿಷ್ಠಾಪಿತ ಕಲ್ಲುಗಾಲಿ ರಥೋತ್ಸವಕ್ಕೆ ಪುರಸಭೆ ಅಧ್ಯೆ ಭವ್ಯಾ ಮಹೇಶ್​ ಚಾಲನೆ ನೀಡಿದರು. ಹಳೆಯ ಟೌನ್​ ಹಾಲ್​ ವೃತ್ತದಿಂದ ಹೊರಟ ರಥವನ್ನು ಶ್ರೀ ಲ್ಮ ವೆಂಕಟರಮಣ ಸ್ವಾಮಿ ದೇವಾಲಯದ ಮಹಾದ್ವಾರದವರೆಗೂ ಎಳೆಯಲಾಯಿತು. ಭಕ್ತರು ತೇರಿನ ಕಳಸಕ್ಕೆ ಹಣ್ಣು ದವನ ಅರ್ಪಿಸಿದರು. ರಥೋತ್ಸವದ ಅಂಗವಾಗಿ ವೀರಗಾಸೆ, ಪಂಡರಾಪುರ ಭಜನೆ ಏರ್ಪಡಿಸಲಾಗಿತ್ತು. ಗೋವಿಂದ, ಗೋವಿಂದ ಜಯೂಷಗಳೊಂದಿಗೆ ರಥ ಎಳೆಯಲಾಯಿತು. ಗಾಣಿಗ ಸಂದ ಸದಸ್ಯರು ಭಗವದ್ಗೀತಾ ಪಾರಾಯಣ ನಡೆಸುತ್ತಾ ರಥದ ಹಿಂದೆ ಸಾಗಿದರು.

ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮಂಜುನಾಥ್​, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮುನಿ ಚಿನ್ನಪ್ಪ, ಎಂ ವೀರಣ್ಣ, ಹರೀಶ್​, ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್​, ಕೇಬಲ್​ ಸುರೇಶ್​, ಬಲಿಜ ಸಂದ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಮಹಾತ್ಮಾಂಜನೇಯ, ಮಾಜಿ ಕಾರ್ಯದರ್ಶಿ ಮುನಿರಾಜು, ಪ್ರಕಾಶ್​, ಸದಸ್ಯರು ಇದ್ದರು.

ಬ್ರಹ್ಮರಥೋತ್ಸವದ ಪ್ರಯುಕ್ತ ಪಂಡರಾಪುರ ಭಜನೆಯ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾರ್ವಜನಿಕರಿಗೆ ಕೋಸಂಬರಿ, ಪಾನಕ, ಅನ್ನದಾನ ಸೇವೆ ಏರ್ಪಡಿಸಲಾಗಿತ್ತು. ಶ್ರೀ ಲಕ್ಷಿ$್ಮ ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿಗಳ ಮೆರವಣಿಗೆ ನೆರವೇರಿತು. ವೀರಗಾಸೆ ಹಾಗೂ ವಾದ್ಯವೃಂದದೊಂದಿಗೆ ಲಾಂಛನಗಳ ಉತ್ಸವ ಮೆರಗು ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net