ವೆಂಕಟರಮಣ ಸ್ವಾಮಿ ಅದ್ದೂರಿ ರಥೋತ್ಸವ

Koppa teru
ಕೊಪ್ಪ ಹುಲುಮಕ್ಕಿ ದಾಸಮಠದಲ್ಲಿ ವೆಂಕಟರಮಣ ಸ್ವಾಮಿ ರಥೋತ್ಸವ ನಡೆಯಿತು.
Published on

ಕೊಪ್ಪ: ಹುಲುಮಕ್ಕಿ ದಾಸಮಠದಲ್ಲಿ ವೆಂಕಟರಮಣ ಸ್ವಾಮಿ ರಥೋತ್ಸವ ಶುಕ್ರವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ವೆಂಕಟರಮಣ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಮನ್ಮಹಾರಥಾರೋಹಣ ನೆರವೇರಿತು. ರಥಾರೋಹಣದಲ್ಲಿ ಆದಿಚುಂಚನಗಿರಿ ಪೀಠದ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹಾಗೂ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಭಾಗಿಯಾಗಿದ್ದರು.
ರಥಕ್ಕೆ ಭಕ್ತರು ದವಸ, ಧಾನ್ಯಗಳನ್ನು ಎರಚಿ ರಥವನ್ನು ಸ್ವಲ್ಪ ದೂರದವರೆಗೆ ಎಳೆದರು. ನಂತರ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಭಕ್ತರು ಅಭಿನಂದಿಸಿದರು.
ರಥೋತ್ಸವ ಪ್ರಯುಕ್ತ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ವೆಂಕಟೇಶ್ವರ ವಿದ್ಯಾಸಂಸ್ಥೆ ಪ್ರಾಚಾರ್ಯ ಮಹಾಬಲೇಶ್, ದೇವಸ್ಥಾನ ಸಮಿತಿಯ ಶ್ರೀನಿವಾಸ್ ಕೊಡ್ರು, ರತ್ನಾಕರ್ ಕುಂಚೂರು, ಕಳಸಪ್ಪ ಹೊಸಮನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net