ಡಾ. ವೆಂಕಟರಮಣ ಹೆಗಡೆ ಹುಬ್ಬಳ್ಳಿಯಲ್ಲಿ ಲಭ್ಯ

Published on

ಹುಬ್ಬಳ್ಳಿ: ವಿಜಯವಾಣಿ ಧನ್ವಂತರಿ ಅಂಕಣಕಾರ, ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ ಇವರು ನ. 30 ಹಾಗೂ ಡಿ. 1ರಂದು ನಗರದಲ್ಲಿ ಉಚಿತ ಸಂದರ್ಶನಕ್ಕೆ ಲಭ್ಯ ಇದ್ದಾರೆ.

ಇಲ್ಲಿಯ ವಿದ್ಯಾನಗರ ಬಳಿಯ ಹನ್ಸ್ ಹೋಟೆಲ್ ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಉಚಿತ ಸಂದರ್ಶನ, ಮುಖತಃ ಭೇಟಿಗೆ ವೈದ್ಯರು ಲಭ್ಯವಿರುತ್ತಾರೆ.

ಡಾ. ವೆಂಕಟರಮಣ ಹೆಗಡೆ ಅವರು ಬರೆದಿರುವ "ಮನೆಯಲ್ಲೇ ಪರಿಹಾರ' "ಆಹಾರ ಆರೋಗ್ಯ' "ಪವರ್ ಡಯಟ್' ಹಾಗೂ "ಅಡುಗೆ ಮನೆಯೇ ಆಸ್ಪತ್ರೆ ಆಹಾರವೇ ಔಷಧ' ಪುಸ್ತಕಗಳು ಹಾಗೂ ಅಲ್ಫಾ ನ್ಯಾಚುರಲ್ ಆಹಾರ ಔಷಧಗಳೂ ಶಿಬಿರದಲ್ಲಿ ಸಿಗಲಿವೆ.

ಡಾ. ವೆಂಕಟರಮಣ ಹೆಗಡೆಯವರ ಭೇಟಿಯ ಸಮಯವನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಫೋನ್ ನಂಬರ್ಗಳಿಗೆ ಕರೆ ಮಾಡಬಹುದು. ಮೊ. 8970822508.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net