

ಕುಂದಾಪುರ: ಅನ್ನದಾನ ಮಾಡುವ ಚಂದ್ರಶೇಖರ ಐತಾಳ್ ಅವರು ಕುಂಭಾಶಿಯಲ್ಲಿ ಉತ್ತಮ ಸಕಲ ವ್ಯವಸ್ಥೆ ಒಳಗೊಂಡ ವಸತಿ ಸಮುಚ್ಚಯ ನಿರ್ಮಿಸಿ, ಇದರಲ್ಲಿ ವಾಸಿಸುವ 128 ಕುಟುಂಬ ಒಳ್ಳೆಯ ಜೀವನ ನಡೆಸಬೇಕೆಂಬ ಹರಕೆಯಿಂದ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಬ್ಬದ ರೀತಿಯಲ್ಲಿ ಮಾಡಿರುವುದು ಹೃದಯ ವೈಶಾಲ್ಯ ತೋರಿಸುತ್ತದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಕುಂದಾಪುರ ತಾಲೂಕಿನ ಕುಂಭಾಶಿಯಲ್ಲಿ ವೆಂಕಟಲಕ್ಷ್ಮೀ ಬಿಲ್ಡರ್ಸ್ ನಿರ್ಮಿಸಿದ ವೆಂಕಟಲಕ್ಷ್ಮೀ ಟವರ‌್ಸನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ರೂಪಿಸುವಾಗ ಅದು ಸಮಯದ ಒಳಗೆ ಆದಾಗ ಮಾತ್ರ ಅದು ಯಶಸ್ಸಾಗುತ್ತದೆ ಎಂದರು.
ಮುಖ್ಯ ಅತಿಥಿ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಚೀಫ್ ಆರ್ಕಿಟೆಕ್ಟ್ ಎ.ಗೋಪಾಲ ಭಟ್ ಮತ್ತು ಬೆಂಗಳೂರಿನ ಹೋಟೆಲ್ ಉದ್ಯಮಿ ಕೆ.ನರಸಿಂಹಮೂರ್ತಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೊಳಹಳ್ಳಿ ಮಹೇಶ ಹೆಗ್ಡೆ, ಎಸ್.ರಾಜು ಪೂಜಾರಿ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್, ಪ್ರಧಾನ ಪುರೋಹಿತ ಕಜ್ಕೆ ರಾಮಕೃಷ್ಣ ಭಟ್, ಕುಂಭಾಶಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ, ಉದ್ಯಮಿ ಸುಬ್ರಾಯ ಭಟ್, ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಗೋಪಾಲಕೃಷ್ಣ ಭಟ್, ವೆಂಕಟಲಕ್ಷ್ಮೀ ಬಿಲ್ಡರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಚಂದ್ರಶೇಖರ ಐತಾಳ್, ನಿರ್ದೇಶಕಿ ಹೇಮಾವತಿ ಐತಾಳ್, ಅನಂತಪದ್ಮನಾಭ ಐತಾಳ್ ಮೊದಲಾದವರು ಉಪಸ್ಥಿತರಿದ್ದರು. ವಿಜಯಕುಮಾರ್ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಎನ್.ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು. ಅವನಿ, ಆರಾಧ್ಯ, ಶ್ರೀಲತಾ ಐತಾಳ್ ಸಹಕರಿಸಿದರು. ಶ್ರೀಲಕ್ಷ್ಮೀ ರಾಮರಾಜ್ ವಂದಿಸಿದರು.
ಡಾ.ಎಂ.ಎನ್.ರಾಜೇಂದ್ರ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಗೋಪಾಲಕೃಷ್ಣ ಭಟ್, ಎ.ಗೋಪಾಲ್ ಭಟ್, ಕೆ.ನರಸಿಂಹಮೂರ್ತಿ, ಮಂಗಳೂರಿನ ಲೆಕ್ಕಪರಿಶೋಧಕ ಪಿ.ನರೇಂದ್ರ ಪೈ, ಕುಂದಾಪುರ ಲೆಕ್ಕಪರಿಶೋಧಕ ಸುಧಾಕರ ಹೆಗ್ಡೆ, ಉದ್ಯಮಿ ಹರೀಶ್ಚಂದ್ರ ಬುರಡೆ, ಮಾನಂಜೆ ಸೊಸೈಟಿ ಮಾಜಿ ಅಧ್ಯಕ್ಷ ಶಂಕರನಾರಾಯಣ ಯಡಿಯಾಳ್, ಮಾನಂಜೆ ಸೊಸೈಟಿ ಅಧ್ಯಕ್ಷ ಪ್ರದೀಪ ಯಡಿಯಾಳ್, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎಸ್.ವಿ.ಅರುಣ್ ಕುಮಾರ್ ಅವರನ್ನು ಗೌರವಿಸಲಾಯಿತು. ವಸತಿ ಸಮುಚ್ಚಯ ನಿರ್ಮಾಣದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.
ವಯಸ್ಸಾದವರೂ ಯಾವ ಜವಾಬ್ದಾರಿ ಇಲ್ಲದೆ ಸಂತೋಷದಿಂದ ನೆಲಸಬಹುದು ಎಂಬ ಉದ್ದೇಶದಿಂದ ಈ ವಸತಿ ಸಮುಚ್ಚಯದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಕುಂದಾಪುರ ಪರಿಸರದಲ್ಲಿ ಕ್ಲಪ್ತ ಸಮಯದಲ್ಲಿ ಅತಿ ಉತ್ತಮವಾಗಿ ಈ ಸಮುಚ್ಚಯ ಮೂಡಿ ಬಂದಿದೆ. -ಎ.ಕಿರಣ್ ಕುಮಾರ್ ಕೊಡ್ಗಿ ಶಾಸಕ https://www.vijayavani.net/efforts-to-make-them-civilized-at-the-primary-level https://www.vijayavani.net/building-a-healthy-society