ಜಿಲ್ಲಾಧ್ಯಕ್ಷರಾಗಿ ವೆಂಕಟ್ ಭಟ್ ಆಯ್ಕೆ

Bdk_Venkat
Published on

ಕುಂಬಳೆ: ಕಾಸರಗೋಡು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್ ಅವರನ್ನು ಕೇರಳ ರಾಜ್ಯ ಸಂಚಾಲಕರನ್ನಾಗಿ ನಿಯಮಿಸಿ ಆದೇಶ ನೀಡಿದ ಹಿನ್ನೆಲೆ ಕಾಸರಗೋಡು ಜಿಲ್ಲೆಯಲ್ಲಿ ಸಂಪನ್ಮೂಲ ವ್ಯಕ್ತಿ ವೆಂಕಟ್ ಭಟ್ ಎಡನೀರು ಅವರನ್ನು ಕಾಸರಗೋಡು ವ್ಯಾಪ್ತಿಗೆ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾಸರಗೋಡು ಚುಸಾಪ ರಾಜ್ಯ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿದ್ದರು. ಅನೇಕ ಚುಟುಕು ಕೃತಿ ಹೊರತಂದಿದ್ದಾರೆ.

ನೂರಾರು ಕವಿಗೋಷ್ಠಿ, ಕವಿತಾ ರಚನಾ ಕಾರ್ಯಾಗಾರವನ್ನು ಸಂಘಟಿಸಿದ್ದಾರೆ. 302 ಎಳ್ಳುಂಡೆ ಕೃತಿಗಳು ಅವರ ಪ್ರಕಟಿತ ಚುಟುಕು ಕೃತಿಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net