

ಬೈಲಹೊಂಗಲ: ಸತ್ಯ, ಶುದ್ಧ ಕಾಯಕಕ್ಕೆ ಮಹತ್ವ ಕೊಟ್ಟು ಕಾಯಕದಿಂದ ಬಂದ ಆದಾಯದಲ್ಲಿ ಜನರಿಗೆ ದಾಸೋಹ ಮಾಡಬೇಕು ಎಂದು ನೇಗಿನಹಾಳ ಸಿದ್ಧಾರೂಢ ಮಠದ ಅದ್ವೆ$ೃತ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಠಾಧೀಶರಿಗೆ ಮಾದರಿ ಪೂಜ್ಯರಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ, ದೈಹಿಕವಾಗಿ ಇಲ್ಲದಿದ್ದರೂ ಅವರು ನೀಡಿದ ಸಂಸ್ಕಾರದಂತೆ ಮುನ್ನಡೆಯೋಣ ಎಂದರು.
ಪ್ರವಚನಕಾರರಾದ ಬಸವ ಮಹಾಂತ ದೇವರು, ಯಮಕನಮರಡಿ ಸಿದ್ದಬಸವ ದೇವರು, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿದರು. ಗುರು ಮಡಿವಾಳೇಶ್ವರ ಮಠದ ಸದ್ಬಕ್ತರು, ನೇಗಿನಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.