

ಇಳಕಲ್ಲ(ಗ್ರಾ): ರಡ್ಡಿ ಸಮಾಜದ ಧರ್ಮಗುರು ವೇಮಾನಂದ ಸ್ವಾಮೀಜಿ ಮತ್ತು ಹೇಮರಡ್ಡಿ ಮಲ್ಲಮ್ಮ ಸಮಾಜದ ‘ಭಕ್ತಿ ರತ್ನಗಳು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದಲ್ಲಿ ನಿರ್ಮಿಸಲಾದ ವೇಮಾನಂದ ಸ್ವಾಮೀಜಿ ಮತ್ತು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಒಂದು ತಿಂಗಳವರೆಗೆ ನಡೆದ ಮಂಡಲಪೂಜಾ ಮುಕ್ತಾಯ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶವಾದ ಹಿರೇಸಿಂಗನಗುತ್ತಿಯಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಒಂದು ದೊಡ್ಡ ಸಾಧನೆ. ಸಮಾಜದವರೆಲ್ಲ ನಿತ್ಯ ದೇವಸ್ಥಾನಕ್ಕೆ ಆಗಮಿಸಿ ಪೂಜೆ, ಪುನಸ್ಕಾರ ಸಲ್ಲಿಸಬೇಕು ಎಂದರು.
ಮಾಜಿ ಸಚಿವ ಅಮರೇಗೌಡ ಭಯ್ಯಪುರ ಮಾತನಾಡಿ, ಸಮಾಜದ ಕುಲ ತಿಲಕರಾದ ಹೇಮರಡ್ಡಿ ಮಲ್ಲಮ್ಮಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸನ್ನಡತೆಯ ಮಾರ್ಗದಲ್ಲಿ ಸಾಗಬೇಕು. ಮುಂದಿನ ಪೀಳಿಗೆಗೆ ಹೇಮರಡ್ಡಿ ಮಲ್ಲಮ್ಮಳ ಜೀವನಗಾಥೆ ತಿಳಿಸಬೇಕು ಎಂದರು.
ರೆಡ್ಡಿ ಗುರುಪೀಠದ ವೇಮಾನಂದ ಸ್ವಾಮೀಜಿ ಹಾಗೂ ನಂದವಾಡಗಿಯ ಡಾ. ಚನ್ನಬಸದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪರತಗೌಡ ಪಾಟೀಲ, ಎಂ. ಆರ್. ಪಾಟೀಲ, ಶಿವನಗೌಡ ಅಗಸಿಮುಂದಿನ, ಸಮಾಜದ ಮುಖಂಡರು ಹಿರಿಯರು ಹಿರಿಯರು ಇದ್ದಾರೆ.