ಮಹಾಯೋಗಿಯ ತತ್ವಾದರ್ಶಗಳಿಂದ ಸಮಾಜದ ಪರಿವರ್ತನೆ

CTD 19 Vemana-03
Published on

ಚಿತ್ರದುರ್ಗ: ಮಹಾಯೋಗಿ ವೇಮನ ಅವರ ತತ್ವಾದರ್ಶಗಳ ಅಳವಡಿಕೆ,ಅವರ ವಚನಗಳನ್ನು ಅಧ್ಯಯನದಿಂದ ಸಮಾಜದ ಪರಿವರ್ತನೆ ಸಾಧ್ಯ ವೆಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು. ಜಿಲ್ಲಾಡಳಿತ ಡಿಸಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಮಹಾ ಯೋಗಿ ವೇ ಮನ ಜಯಂತಿ ಆಚರಣೆಯಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಹದಿನೈದನೇ ಶತಮಾನದಲ್ಲಿ ಅಂಕು-ಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿ ದಾರಿಗೆ ತರಲು ಯತ್ನಿಸಿದ ವೇಮನರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ವೇಮನರ ಪೂರ್ವದ ಜೀವನ,ನಂತರ ಅವರು ಯೋಗಿಗಳಾಗಿ ಪರಿವರ್ತನೆಯಾಗಿದ್ದನ್ನು ಇತಿಹಾಸ ದಿಂ ದ ಅರಿತಿದ್ದೇವೆ ಎಂದರು.

ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಮಾತನಾಡಿ,ಮಹಾಕವಿ,ಮಹಾಯೋಗಿ ಎಂದು ವೇಮನರನ್ನು ಕರೆಯುತ್ತೇವೆ. ರಾಜ ಕು ಟುಂಬಕ್ಕೆ ಸೇರಿದ ವೇಮನರು ವೈಭೋಗ ತ್ಯಾಗ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಅಸ್ಪಶ್ಯತೆ,ಜಾತಿಪದ್ಧತಿ,ಅಸಮಾನತೆ ವಿರುದ್ಧದ ಹೋರಾಟದಲ್ಲಿ ಶ್ರೇಷ್ಠ ದಾರ್ಶನಿಕರಾಗಿ ಗುರುತಿಸಿಕೊಂಡಿದ್ದರು.

ವೇಮನರ ಪರಿವರ್ತನೆಗೆ ಅವರ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಕಾರಣರಾಗಿದ್ದಾರೆ. ಸರ್ವಜ್ಞರ ತ್ರಿಪದಿಗಳಂತೆ ತೆಲುಗಿನಲ್ಲಿ ವೇಮನರು ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದುವ,ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿದ್ದಾರೆ ಎಂದರು.

ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ರೆಡ್ಡಿ ಸಮುದಾಯದ ಮುಖಂಡರಾದ ರಾಮಕೃಷ್ಣ ರೆಡ್ಡಿ,ಅಶ್ವತ್ಥ್ ರೆಡ್ಡಿ,ವಿಜಯಕುಮಾರ್,ವೆಂಕಟೇಶ್‌ರೆಡ್ಡಿ,ತಿಪ್ಪೇಸ್ವಾಮಿ ರೆಡ್ಡಿ,ವೆಂಕಟೇಶ್ ರೆಡ್ಡಿ,ಡಾ.ಜಗದೀಶ್,ಎಸ್.ಆರ್.ಪತ್ತಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net