ಅರಿವಿನ ಬೀಜ ಬಿತ್ತಿದ ವೇಮನ

Vemana who sowed the seed of knowledge
ಬಸವನಬಾಗೇವಾಡಿ ತಹಶೀಲ್ದಾರ್​ ಕಚೇರಿಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಶಂಕರಗೌಡ ಬಿರಾದಾರ, ಎಸ್​.ಎಂ.ಗುರಡ್ಡಿ, ಸಂಕನಗೌಡ ಪಾಟೀಲ, ಸಂಗಮೇಶ ಹುಜರತಿ,್ತ ಪ್ರಭು ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಕಾಯಕ ಮತ್ತು ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿದ್ದ ವೇಮನ ತಾವು ಕಂಡ ಸತ್ಯವನ್ನು ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕಾಧ್ಯ ಶಂಕರಗೌಡ ಬಿರಾದಾರ ಹೇಳಿದರು.

ಪಟ್ಟಣದ ತಹಸೀಲ್ದಾರ್​ ಕಚೇರಿಯಲ್ಲಿ ತಾಲೂಕಾಡಳಿತದಿಂದ ಭಾನುವಾರ ಆಚರಿಸಿದ ವೇಮನ ಜಯಂತಿಯಲ್ಲಿ ಮಾತನಾಡಿದ ಅವರು, ದಾರ್ಶನಿಕರಾಗಿದ್ದ ವೇಮನ ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿ ಹೋಗಲಾಡಿಸಲು ನಿರಂತರ ಶ್ರಮಿಸಿದ್ದರು ಎಂದು ಸ್ಮರಿಸಿದರು.

ಉಪತಹಸೀಲ್ದಾರ್​ ಬೋರಮ್ಮ ಪೊಲೆಸಿ, ನ್ಯಾಯವಾದಿಗಳ ಸಂದ ಅಧ್ಯ ಎಸ್​.ಎಂ.ಗುರಡ್ಡಿ, ರವಿ ಚಿಕ್ಕೊಂಡ, ಸಂಕನಗೌಡ ಪಾಟೀಲ, ಸಂಗಮೇಶ ಹುಜರತಿ,್ತ ಪ್ರಭು ಪಾಟೀಲ, ಬಸವರಾಜ ದಾನಿ, ಶಿವಾನಂದ ತೋಳನೂರ, ಎ.ಟಿ. ಪಾಟೀಲ, ಶಂಕರ ತಳವಾರ, ಆರ್​.ವಿ.ಘಾಟಗೆ, ನಿರ್ಮಲಾ ಪೂಜಾರಿ, ಎಸ್​.ಬಿ.ಕುಂಬಾರ ಉಪಸ್ಥಿತರಿದ್ದರು. ಮಂಜುನಾಥ ಹಳ್ಳೂರ ಸ್ವಾಗತಿಸಿದರು. ವಿರೇಶ ಗುಡ್ಲಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net