ಪ್ರಯತ್ನಕ್ಕೆ ಪರಮಾತ್ಮನ ಬೆಂಬಲ ಸದಾ : ಹಿತಾ ಉಮೇಶ್ ಅಭಿಮತ

New Project (63)
Published on

ಮೂಲ್ಕಿ: ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬರಲಿ ಅವುಗಳ ನಿವಾರಣೆ ಪ್ರಯತ್ನ ಪಡುವವರಿಗೆ ಆತ್ಮವಿಶ್ವಾಸ ಹೊಂದಿರುವವರಿಗೆ ಪರಮಾತ್ಮನು ಸಹಾಯ ಮಾಡುತ್ತಾನೆ. ಪ್ರಯತ್ನಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ ಹಾಗಾಗಿ ಅವರ ಚಿಂತನೆಗಳು ತಿಳಿಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ನಕ್ಷತ್ರದಂದು ಪುನರೂರು ಪ್ರತಿಷ್ಠಾನ ವಿಶಿಷ್ಟ ರೀತಿಯಲ್ಲಿ ವಿವೇಕಾ ಜಾಗೃತಿ ಯುವಜನಾಂಗದಲ್ಲಿ ಮೂಡಿಸುತ್ತಾ ಬಂದಿರುತ್ತದೆ ಎಂದು ಯುವ ವಾಗ್ಮಿ ಹಿತಾ ಉಮೇಶ್ ಕಟೀಲು ಹೇಳಿದರು.

ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ನ ಸಭಾಂಗಣದಲ್ಲಿ ಜರುಗಿದ ವಿವೇಕಾ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.

ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿಯ ಉದ್ಯಮಿ ಶ್ರೀಕಾಂತ್ ಭಟ್ ಹೆಜಮಾಡಿ, ಜನ ವಿಕಾಸ ಸಮಿತಿ ಮೂಲ್ಕಿ ಅಧ್ಯಕ್ಷೆ ಅಕ್ಷತಾ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಆನಂದ ಮೇಲಾಂಟ, ಗೀತಾ ಶೆಟ್ಟಿ, ಶಶಿಕರ ಕೆರೆಕಾಡು, ಶೋಭಾ ರಾವ್, ಸ್ಥಳೀಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು, ಶಿಮಂತೂರಿನ ಶ್ರೀ ಶಾರದ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net