

ಕುಮಟಾ: ಅತಿವೃಷ್ಟಿಯಿಂದಾಗಿ ಶಿಥಿಲಗೊಂಡು ಕುಸಿಯತೊಡಗಿದ್ದ ತಾಲೂಕಿನ ಸಂತೆಗುಳಿ ಬಳಿ ಕುಮಟಾ-ಸಿದ್ದಾಪುರ ಮಾರ್ಗದಲ್ಲಿನ ಸೇತುವೆಗೆ ತಾತ್ಕಾಲಿಕವಾಗಿ ಕಬ್ಬಿಣದ ಚೌಕಟ್ಟುಗಳಿಂದ ಆಧಾರ ಒದಗಿಸಲಾಗಿದ್ದು, ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ.
ಸೋಮವಾರ ಸೇತುವೆ ಜಾಗಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ತಹಸೀಲ್ದಾರ್ ಸತೀಶ ಗೌಡ ಇತರರು ಸಮಸ್ಯೆಯನ್ನು ಪರಿಶೀಲಿಸಿದರು. ಹೊಸ ಸೇತುವೆ ನಿರ್ವಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಪಿಡಬ್ಲು್ಯಡಿ ಇಲಾಖೆಗೆ ಸೂಚಿಸಿದರು.
ಇದಕ್ಕೂ ಮುನ್ನ ಉಳ್ಳೂರಮಠಕ್ರಾಸ್ ಬಳಿಯ ಗುಡ್ಡ ಕುಸಿತ ಪ್ರದೇಶವನ್ನು ವೀಕ್ಷಿಸಿ ಎಇಇ ಸೋಮನಾಥ ಭಂಡಾರಿ, ಎಇಇ ರಾಘವೇಂದ್ರ ಹಾಗೂ ಕಂದಾಯ ಅಧಿಕಾರಿಗಳಿಂದ, ಸ್ಥಳೀಯರಿಂದ ಮಾಹಿತಿ ಪಡೆದರು.
ಹೊಳೆಗದ್ದೆ ಟೋಲ್ಗೇಟ್ ಬಳಿ ತಂಗಿರುವ ವಾಹನ ಚಾಲಕರು ಹಾಗೂ ಸಿಬ್ಬಂದಿಗೆ ಶಾಸಕ ದಿನಕರ ಶೆಟ್ಟಿ ಊಟೋಪಚಾರ ನೀಡಿ, ಅವರ ಸಮಸ್ಯೆ ಆಲಿಸಿದರು. ಜಿ.ಐ. ಹೆಗಡೆ, ಕುಮಾರ ಭಟ್, ವಿಶ್ವನಾಥ ನಾಯ್ಕ, ಕೃಷ್ಣ ನಾಯ್ಕ, ಕುಮಾರ ಕವರಿ, ರಾಮಚಂದ್ರ ಪಟಗಾರ, ಕೇಶವ ಮಡಿವಾಳ, ಪಾಂಡು ಪಟಗಾರ ಇತರರು ಇದ್ದರು.