ಪ್ರತ್ಯೇಕ ಅಪಘಾತ,26 ಜನರಿಗೆ ಗಾಯ

images555
Published on

ಚಿತ್ರದುರ್ಗ:ಜಿಲ್ಲೆಯಲ್ಲಿ ಗುರುವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ 26 ಜನರಿಗೆ ಗಾಯಗಳಾಗಿವೆ. ಚಳ್ಳಕೆರೆ ತಾಲೂಕು ಬೋಸೆ ದೇವರಹಟ್ಟಿ ಸಮೀಪ ಬೆಳಗ್ಗೆ 8.30ರ ಅಶೋಕ ಲೇಲ್ಯಾಂಡ್ ವಾಹನವೊಂದು ಪಲ್ಟಿ ಹೊಡೆದು ಅದರಲ್ಲಿದ್ದ ಚಳ್ಳಕೆರೆ ತಾಲೂಕು ಮಲ್ಲೂರಹಳ್ಳಿ ಗ್ರಾಮದ 12 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಿನಿಬಸ್ ಪಲ್ಟಿ

ಹಿರಿಯೂರು ತಾಲೂಕು ಐಮಂಗಲದ ರಾ.ಹೆ.4 ಚೈತನ್ಯ ಎನ್‌ಕ್ಲ್ಯೈವ್ ಬಳಿ ಗುರುವಾರ ನಸುಕಿನಲ್ಲಿ ಮಿನಿ ಬಸ್ಸೊಂದು ಚರಂಡಿಗೆ ಬಿದ್ದು ವಾಹನ ದಲ್ಲಿದ್ದ ಬೆಂಗಳೂರಿನ 14 ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕರ ಅತಿವೇಗದ ಚಾಲನೆ ಮತ್ತು ನಿರ್ಲಕ್ಷೃವೇ ಅಪಘಾತಗಳಿಗೆ ಕಾರಣ ವೆಂದು ಪ್ರಕರಣ ದಾಖಲಿಸಿರುವ ನಾಯಕನಹಟ್ಟಿ ಹಾಗೂ ಐಮಂಗಲ ಪೊಲೀಸರು ತಿಳಿಸಿದ್ದಾರೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net