ಇಳಕಲ್ಲ(ಗ್ರಾ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಸುರಭಿ ಢಾಬಾ ಸಮೀಪ ಗುರುವಾರ ಅಪರಿಚಿತ ಲಾರಿ ಡಿಕ್ಕಿ ಹೊಡೆದು ಐಸ್ ಕ್ಯೂಬ್ ತುಂಬಿದ್ದ ಅಪ್ಪೆ ವಾಹನ ಪಲ್ಟಿಯಾಗಿದೆ..ಅಪಘಾತದಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.