ವಾಹನ ಪಲ್ಟಿಯಾಗಿ ಮಹಿಳೆ ಸಾವು, 11 ಜನರಿಗೆ ಗಾಯ

0101
Published on

ಬೆಳಗಾವಿ: ಜಾತ್ರೆಗೆ ಹೊರಟ್ಟಿದ್ದ ಬುಲೆರೊ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮಹಿಳೆ ಮೃತಪಟ್ಟು, 11 ಜನರು ಗಾಯಗೊಂಡು ಜಿಲ್ಲಾಸ್ಪತ್ರೆ ಸೇರಿದ ಘಟನೆ ಬುಧವಾರ ತಡರಾತ್ರಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ನಿವಾಸಿ ಮಹಾದೇವಿ ಭೀಮಪ್ಪ ಹುಕ್ಕೇರಿ (46) ಮೃತ ಮಹಿಳೆ. ಕವಿತಾ ಹುಕ್ಕೇರಿ (16), ನಿಂಗಪ್ಪ ಪುಲಾರಕೊಪ್ಪ (56), ದಾನಮ್ಮ ಹುಕ್ಕೇರಿ (18), ಸಾವಕ್ಕ ಗಿಡಗಪ್ಪಗೋಳ (35), ಪ್ರಕಾಶ (17), ನಾಗಪ್ಪ (42), ನಾಗಪ್ಪ ಗದಿಗೆಪ್ಪಗೊಳ (52), ನೀಲವ್ವ ಹುಕ್ಕೇರಿ (11), ಮಹೇಶ ಹುಕ್ಕೇರಿ (10), ಆರ್.ಎಸ್.ಹುಕ್ಕೇರಿ (17), ವಿಠ್ಠಲ ಗದಿಗೆಪ್ಪಗೊಳ ಗಾಯಗೊಂಡವರು.

ಚಿಕ್ಕಲದಿನ್ನಿ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬುಧವಾರ ರಾತ್ರಿ ಬಡಾಲ ಅಂಕಲಗಿ ಗ್ರಾಮದಿಂದ ಹೊರಟಿದ್ದರು. ಪ್ರಯಾಣದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net