

ಹಾಸನ: ವಾಹನಗಳ ನಂಬರ್ ಪ್ಲೇಟ್ ಹಾಗೂ ಇತರೆಡೆ ಬೇಕಾಬಿಟ್ಟಿ ವಾಕ್ಯಗಳ ಬರವಣಿಗೆ ವಿರುದ್ಧ ಸಮರ ಸಾರಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಂಗಳವಾರ ವಾಹನಗಳ ತಪಾಸಣೆ ನಡೆಸಿದರು.
ಕಾನೂನಿಗೆ ವಿರುದ್ಧವಾಗಿ ಬರೆಸುವುದನ್ನು ತಡೆಹಿಡಿಯಬೇಕೆಂದು ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆರ್‌ಟಿಒ ಟಿ. ಅಶೋಕ್‌ಕುಮಾರ್ ನೇತೃತ್ವದಲ್ಲಿ ಡೇರಿ ವೃತ್ತದಲ್ಲಿ ಕಾರ್ಯಾಚರಣೆ ನಡೆಯಿತು.
ನಂಬರ್ ಪ್ಲೇಟ್ ಮೇಲೆ ಹೆಸರು ಬರೆಸಿರುವ ಸಂಬಂಧ ಈಗಾಗಲೇ ಹಲವು ಪ್ರಕರಣ ದಾಖಲಾಗಿವೆ. ವಾಹನ ಚಾಲಕರಿಗೆ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಉಲ್ಲಂಘನೆಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಅವರು ತಿಳಿಸಿದರು.