ವಾಹನಗಳ ಪರಸ್ಪರ ಮುಖಾಮುಖಿ ಡಿಕ್ಕಿ: ಕಾರ್ಮಿಕರು ಆಸ್ಪತ್ರೆಗೆ

IMG-20241106-WA0111-1.jpg
Published on

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಬಸವಾಪುರ ಬಳಿ ರಾತ್ರಿ  ಗಾರ್ಮೆಂಟ್ ಕಾರ್ಖಾನೆ ಬಸ್ ಹಾಗೂ ಕ್ರೂಸರ್ ಡಿಕ್ಕಿಯಾಗಿ 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  

ದೊಡ್ಡಬಳ್ಳಾಪುರ ತಾಲೂಕಿನ ಇಂಡಿಗೋ ಬ್ಲೂ ಕಾರ್ಖಾನೆಯ ಗಾರ್ಮೆಂಟ್ ಬಸ್ ಹಾಗೂ ಹಿಂದೂಪುರದ ಕಡೆಯಿಂದ ಬರುತ್ತಿದ್ದ ಕ್ರೂಸರ್ ಬಸವಾಪುರದ ಬಳಿ ಬರುತ್ತಿದ್ದಾಗ ಮುಖ ಮುಖಿ ಡಿಕ್ಕಿಯಾಗಿವೆ.  ಕ್ರೂಸರ್ ನ ಲ್ಲಿದ್ದ 4 ಹಾಗೂ ಬಸ್ ನಲ್ಲಿದ್ದ ಇಬ್ಬರು ಸೇರಿ 6 ಮಂದಿಗೆ ಗಾಯಗಳಾಗಿದ್ದು, ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದ ಸುಮಾರು 14ಕ್ಕೂ ಹೆಚ್ಚು ಮಹಿಳೆಯರಿಗೆ ಸಣ್ಣಪುಟ್ಟ ಗಾ ಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

*ಮದುವೆಗೆ ಬರುತ್ತಿದ್ದವರು ಆಸ್ಪತ್ರೆಗೆ*

ಕ್ರೂಸರ್ ವಾಹನದಲ್ಲಿದ್ದ ಆಂಧ್ರ ಪ್ರದೇಶದ ಸೋಮಂದೆಪಲ್ಲಿಯ ಅನುಸೂಯ, ಕೃಷ್ಣಪ್ಪ, ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಹಾಗೂ ಬಸ್ನಲ್ಲಿದ್ದ ಕಾರ್ಮಿಕರಾದ ಗೌರಿಬಿದನೂರಿನ ಅಲಕಾಪುರದ ಗಂಗರತ್ನಮ್ಮ ಹಾಗೂ ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್ ನ ಮದುಪ್ರಿಯ ಗಾಯಾಳುಗಳು.

ಕ್ರೂಸರ್ ವಾಹದಲ್ಲಿದ್ದವರು ಸೋಮಂದೇಪಲ್ಲಿಯವರು ತಮ್ಮ ಸಂಬಂಧಿಕರ ಮದುವೆಗೆಂದು ಹಿಂದೂಪುರ-ಗೌರಿಬಿದನೂರು ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದರು. ಬಸ್ ನಲ್ಲಿದ್ದ  ಕಾರ್ಮಿಕರು ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದರು.   

*ಕಾರ್ಮಿಕರ ಪ್ರಾಣದೊಂದಿಗೆ ಚಲ್ಲಾಟ*

ಗೌರಿಬಿದನೂರು ತಾಲೂಕಿಗೆ ಪ್ರತಿದಿನ  ಸುಮಾರು 24 ಹೆಚ್ಚು ವಾಹನಗಳ ಮೂಲಕ ಪ್ರತಿದಿನ ಕಾರ್ಮಿಕರನ್ನು ಹೆಣ್ಣು ಮಕ್ಕಳ ಕಾರ್ಮಿಕರನ್ನು ದೊಡ್ಡಬಳ್ಳಾಪುರ ಕೆಲಸಕ್ಕೆ ಕಾರ್ಖಾನೆ ಅವರು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ಬಹುತೇಕ ಬಸ್ ಮತ್ತು ಟೆಂಪೋಗಳಲ್ಲಿ ಯಾವುದೇ ರೀತಿಯ ಸುರಕ್ಷತೆಗಳನ್ನು ಪಾಲಿಸುತ್ತಿಲ್ಲ. ವಿಮೆ ಸೌಲಭ್ಯವಿಲ್ಲ. ವಾಹನಗಳು ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. ಸೂಕ್ತ ತರಬೇತಿ ಹೊಂದಿರದ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಮೊಬೈಲ್ಗಳಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿದೆ. ಸಮವಸ್ತ್ರ ಧರಿಸುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ಭದ್ರತೆ ಬಗ್ಗೆ ನಿರ್ಲಕ್ಷ್ಯ ತೋರಿ ಕಾರ್ಮಿಕರ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಾದ ಅಗತ್ಯವಿದೆ.  

= = = = = =

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net