ಅಲೆಮನೆ ಶಾಲೆಗೆ ಶೃಂಗೇರಿ ಶ್ರೀಮಠದಿಂದ ವಾಹನ

Kpp1 (5)
Published on

ಕೊಪ್ಪ: ಹಿರೇಕೊಡಿಗೆ ಅಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೃಂಗೇರಿ ಶ್ರೀಮಠದಿಂದ ಶಾಲಾ ವಾಹನವಾಗಿ ಮಾರುತಿ ಓಮಿನಿ ಕಾರನ್ನು ಉಚಿತವಾಗಿ ನೀಡಲಾಯಿತು.

ಗಡಿಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಕಾರಿಗೆ ಪೂಜೆ ಸಲ್ಲಿಸಿದ ಬಳಿಕ ಎಸ್‌ಡಿಎಂಸಿ ಅಧ್ಯಕ್ಷ ಗುರುಮೂರ್ತಿ ಅಸೂಡಿ ಮಾತನಾಡಿ, ನಮ್ಮ ಶಾಲೆ ಶತಮನೋತ್ಸವ ಕಂಡಿದೆ. ಶಾಲೆಯನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಅಭಿವೃದ್ಧಿ ಪಡಿಸಲಾಗುತ್ತಿದೆ. ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಆರಂಭಿಸಲಾಗಿದೆ. ಇದರಿಂದ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದರು.

ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದು, ಇದಕ್ಕೆ ಶೃಂಗೇರಿ ಶ್ರೀಮಠ ಕೂಡ ನಮ್ಮ ಜತೆಯಲ್ಲಿ ನಿಂತಿದೆ. ಮಠದಿಂದ ಮಕ್ಕಳನ್ನು ಶಾಲೆಗೆ ಕೆರೆದುಕೊಂಡು ಬರಲು ಹಾಗೂ ಬಿಡಲು ವಾಹನದ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಶಾಲೆಗೆ ಉಚಿತವಾಗಿ ಓಮಿನಿ ಕಾರನ್ನು ನೀಡಿದ್ದಾರೆ. ಇದರಿಂದ ಶಾಲೆ ಸ್ವಂತ ವಾಹನ ಹೊಂದಿದಂತಾಗಿದೆ. ಸರ್ಕಾರಿ ಶಾಲೆ ಉಳಿಸುವ ಕಾರ್ಯದ ಜತೆಗೆ ನಿಂತ ಶೃಂಗೇರಿ ಶ್ರೀಮಠದ ಶ್ರೀಗಳ ಆಪ್ತ ಕಾರ್ಯದರ್ಶಿಯಾದ ಶಂ.ನಾ ಕೃಷ್ಣಮೂರ್ತಿ ಹಾಗೂ ಹಿರಿಯರಾದ ಪ್ರಸನ್ನ ಭಟ್ ಇವರಿಗೆ ಧನ್ಯವಾದಗಳನ್ನು ತಿಳಿಸುತ್ತೆನೆ ಎಂದರು.

ಶಾಲಾ ಮುಖ್ಯಶಿಕ್ಷಕಿ ಮಂಜುಳಾ ದೇವಿ, ಎಸ್‌ಡಿಎಂಸಿ ಸದಸ್ಯರಾದ ಸುರೇಶ್ ಅಬ್ಬಿಗುಂಡಿ, ನಿವೃತ್ತ ಶಿಕ್ಷಕಿ ಶೈಲಾ, ಶಾಲಾ ಶತಮನೋತ್ಸವ ಸಮಿತಿ ಸಂಚಾಲಕ ಹೆಚ್.ಎಂ.ರವಿಕಾಂತ್, ಗ್ರಾಪಂ ಮಾಜಿ ಸದಸ್ಯ ವಿಶ್ವ ಹೆಚ್.ಕೆ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net