ಅಕ್ಟೋಬರ್ ೨೩ಕ್ಕೆ ವಾಹನಗಳ ಅಲಂಕಾರ ಸ್ಪರ್ಧೆ

alankara samiti
Published on

ಮಡಿಕೇರಿ: ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ಅ.೨೩ಕ್ಕೆ ವಾಹನಗಳ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಯುಧ ಪೂಜೆ ದಿನವಾದ ಅ.೨೩ ರಂದು ಅಲಂಕೃತ ವಾಹನಗಳು ಸಂಜೆ ೬:೩೦ ಗಂಟೆ ಒಳಗೆ ಗಾಂಧಿ ಮೈದಾನಕ್ಕೆ ಬರಬೇಕು. ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಆಕರ್ಷಕ ವಾಹನಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ ಆಯ್ಕೆಮಾಡಲಿದ್ದಾರೆ. ಸೈಕಲ್, ಲಾರಿ, ಬಸ್, ಜೆಸಿಬಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ತಿಳಿಸಿದ್ದಾರೆ.


ಕಟ್ಟಡ ಅಲಂಕಾರ: ವಿಜಯದಶಮಿಯ(ಅ.೨೪ ರಂದು) ಸಂಜೆ ೬.೩೦ ಗಂಟೆಯೊಳಗೆ ಕಟ್ಟಡಗಳ ಅಲಂಕಾರ ಪೂರ್ಣಗೊಳಿಸಬೇಕು. ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಕಟ್ಟಡ ಹಾಗೂ ಮಳಿಗೆಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಲಿದ್ದಾರೆ. ವಾಣಿಜ್ಯ ಸಂಕೀರ್ಣಗಳು, ಹೋಟೆಲ್, ಅಂಗಡಿ, ಮಳಿಗೆಗಳು, ಸರ್ಕಾರಿ ಕಟ್ಟಡ, ಅರೆ ಸರ್ಕಾರಿ ಕಟ್ಟಡ, ಸಹಕಾರಿ ಕಟ್ಟಡ ಸೇರಿದಂತೆ ಎಲ್ಲಾ ಬಗೆಯ ಕಟ್ಟಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸುಮಿತಿಯ ಉಪಾಧ್ಯಕ್ಷ ರವಿಗೌಡ(೯೬೧೧೧೦೧೦೭೦) ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ಜಿ.ಎನ್.ಪುನೀತ್(೭೦೨೨೬೮೫೮೬೮) ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.


ಈಗಾಗಲೇ ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಯ ತೀರ್ಪುಗಾರಿಕೆ ಹಾಗೂ ಮನೆಗಳಲ್ಲಿ ಗೊಂಬೆ ಜೋಡಣೆಯ ತೀರ್ಪುಗಾರಿಕೆ ಮುಗಿದಿದೆ. ಇವುಗಳ ಬಹುಮಾನವನ್ನು ಆಯುಧ ಪೂಜೆಯ ದಿನದಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net