ಡಿಕ್ಕಿ, ಬೈಕ್ ಹಿಂಬದಿ ಸವಾರ ಸಾವು

accident-15
Published on

ಬೆಳಗಾವಿ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ತಾಲೂಕಿನ ಹೊನಗಾದ ರಾಯಲ್ ರಸೋಯಿ ದಾಬಾ ಬಳಿ ಶುಕ್ರವಾರ ನಡೆದಿದೆ. ಭೂತರಾಮನಹಟ್ಟಿಯ ಮಹೇಶ ನಂದನವಾಡ (29) ಮೃತ. ಮೃತ ಮಹೇಶನ ಸಹೋದರ ಮಾರುತಿ ನಂದನವಾಡ ತನ್ನ ಬೈಕ್ ಮೇಲೆ ಮಹೇಶನನ್ನು ಕೂಡ್ರಿಸಿಕೊಂಡು ಬೆಳಗಾವಿ ಕಡೆಗೆ ಬರುವಾಗ ವಾಹನ ಡಿಕ್ಕಿ ಹೊಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net