ವಾಹನ ತಪಾಸಣಾ ಕೇಂದ್ರ ಆರಂಭ

18Kush02
ಕುಶಾಲನಗರ ಕೊಪ್ಪ ಗೇಟ್ ಬಳಿ ವಾಹನಗಳ ತಪಾಸಣೆ ನಡೆಸಿದ ಸಿಬ್ಬಂದಿ
Published on

ಕುಶಾಲನಗರ: ಏ.26ರಂದು ನಡೆಯುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು, ಮೈಸೂರು ಗಡಿಭಾಗವಾದ ಕೊಪ್ಪ ಗೇಟ್ ಬಳಿ ಭಾನುವಾರದಿಂದ ವಾಹನಗಳ ತಪಾಸಣಾ ಕೇಂದ್ರ ಆರಂಭಿಸಲಾಯಿತು.


ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಡಿಯಲ್ಲಿ ವಾಹನಗಳ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿ, ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ. ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಮತ್ತು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರ ವಾಹನ ತಪಾಸಣಾ ಕಾರ್ಯ ಬಿರುಸಾಗಿತ್ತು. ವಾಹನಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net