ಕೇರಳದಿಂದ ತ್ಯಾಜ್ಯ ಸಾಗಿಸುತ್ತಿದ್ದ ವಾಹನ ವಶ

4vpt 1
Published on

ವಿರಾಜಪೇಟೆ: ಗಡಿ ಭಾಗ ಮಾಕುಟ್ಟದಲ್ಲಿ ಕೇರಳದಿಂದ ತ್ಯಾಜ್ಯವನ್ನು ತುಂಬಿಕೊಂಡು ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಚಾಲಕನಿಗೆ ದಂಡ ವಿಧಿಸಲಾಗಿದೆ.

ಸೋಮವಾರ ಮುಂಜಾನೆ ರಾಜ್ಯ ಗಡಿಭಾಗವಾದ ಮಾಕುಟ್ಟ ಅರಣ್ಯ ತಪಾಸಣೆ ಕೇಂದ್ರದಲ್ಲಿ ವಾಹನಗಳ ತಪಾಸಣೆ ಮಾಡುವಾಗ ಈ ಮಾರ್ಗದಲ್ಲಿ ಬರುತ್ತಿದ್ದ ವಾಹನವನ್ನು ತಡೆದು ತಪಾಸಣೆ ಮಾಡಿದಾಗ ತ್ಯಾಜ್ಯ ತುಂಬಿದ ಚೀಲಗಳು ಪತ್ತೆಯಾದವು. ಕೇರಳ ರಾಜ್ಯದ ಕಣ್ಣೂರು ಭಾಗದ ವಿವಿಧೆಡೆ ಸಂಗ್ರಹವಾದ ತ್ಯಾಜ್ಯವನ್ನು ಕೊಳ್ಳೇಗಾಲಕ್ಕೆ ಸಾಗಿಸುತ್ತಿರುವುದಾಗಿ ಚಾಲಕ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದ ನಿವಾಸಿ ಜಿ.ಭೈರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಚಾಲಕನಿಗೆ 1000 ರೂ. ದಂಡ ವಿಧಿಸಿ ವಾಹನವನ್ನು ಕೇರಳಕ್ಕೆ ವಾಪಸ್ ಕಳುಹಿಸಲಾಯಿತು. ಉಪ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ಮಹಾದೇವ ಹುರುಳಿ ಹಾಗೂ ಸಹಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net