ರಾಯಚೂರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿದ್ದು ಕುಂಬಮೇಳಕ್ಕೆ ತೆರಳಿದ್ದ ನಗರದ ಗಾಜಗಾರಪೇಟೆ ನಿವಾಸಿಗಳ ವಾಹನ ಅಪಘಾತವಾಗಿ ಗಂಭೀರ ಗಾಯಗಳಾದ ಘಟನೆ ಮಧ್ಯಪ್ರದೇಶದ ನಾಗಪುರು ಬಳಿ ಸೋಮವಾರ ಜರುಗಿದೆ.
ನಗರದ ಗಜಾಗಾರಪೇಟೆಯ ನಿವಾಸಿಗಳಾದ ಗೋನಾರ ಮಧು ಮತ್ತು ಬೇಲ್‌ಪುರಿ ವಿಠ್ಠಲ್ ಸೇರಿ ಒಟ್ಟು ೧೦ ಜನರು ಮಧ್ಯಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬಮೇಳದಲ್ಲಿನ ಪುಣ್ಯ ಸ್ಥಾನ ಮಾಡಿ ಹಿಂತಿರುಗಿ ನಗರಕ್ಕೆ ಆಗಮಿಸುವಾಗ ಟೆಂಪೋ ಟ್ರಾವಲ್ ಮತ್ತು ಲಾರಿ ಮಧ್ಯೆ ಢಿಕ್ಕಿಸಂಭವಿಸಿ ವಾಹನದಲ್ಲಿದ್ದ ನಾಲ್ಕು ಜನರು ಗಾಯಗೊಂ
ಡಿದ್ದಾರೆ. ಗಾಯಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.