ಮಕ್ಕಳ ಆರೋಗ್ಯಕ್ಕೆ ತರಕಾರಿಗಳು ಪೂರಕ

9bhr 2
Published on

ಬಾಳೆಹೊನ್ನೂರು: ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಪೂರಕವಾಗಿದ್ದು, ಮಕ್ಕಳಿಗೆ ಉತ್ತಮ ಆರೋಗ್ಯ ನೀಡಲಿದೆ ಎಂದು ಮುಖ್ಯಶಿಕ್ಷಕಿ ರಜನಿ ದೇವಯ್ಯ ಹೇಳಿದರು.

ರೇಣುಕನಗರದ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ತರಕಾರಿ ದಿನಾಚರಣೆಯಲ್ಲಿ ಮಾತನಾಡಿ, ತರಕಾರಿಗಳು ಒಬ್ಬ ವ್ಯಕ್ತಿಯ ದೇಹಕ್ಕೆ ಸರಿಯಾದ ಪೋಷಣೆ ಒದಗಿಸಲಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು,ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿ ತರಕಾರಿಗಳನ್ನು ಸೇವಿಸುವುದರಿಂದ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದಾಗಿದೆ. ಪ್ರಮುಖವಾಗಿ ಹೃದಯ ರೋಗ, ಮಧುಮೇಹ, ಕ್ಯಾನ್ಸರ್ ಮುಂತಾದವನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಒಂದೊಂದು ತರಕಾರಿಗಳಿಂದ ಒಂದೊಂದು ಉಪಯೋಗಗಳಿದ್ದು, ರಕ್ತದೊತ್ತಡ, ತೂಕಇಳಿಕೆ, ಮೂತ್ರಪಿಂಡದ ಕಲ್ಲು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಕಣ್ಣು, ಚರ್ಮ, ಬುದ್ಧಿಮತ್ತೆಗೆ ಹಲವಾರು ತರಕಾರಿಗಳು ಸಹಕಾರಿ ಎಂದು ತಿಳಿಸಿದರು.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಇದರ ಮಹತ್ವ ತಿಳಿಸಿ ನಿತ್ಯ ಬಳಸಲು ಮಾರ್ಗದರ್ಶನ ಮಾಡಿದರೆ ಉತ್ತಮ ಆರೋಗ್ಯದೊಂದಿಗೆ ಜ್ಞಾನವೂ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ತರಕಾರಿ ದಿನಾಚರಣೆ ನಡೆಸಲಾಗಿದೆ ಎಂದರು.

ಪುಟಾಣಿಗಳು ವಿವಿಧ ತರಕಾರಿಗಳ ವೇಷ ಭೂಷಣಗಳನ್ನು ಧರಿಸಿ ಗಮನ ಸೆಳೆದಿದ್ದು, ಎಲ್ಲಾ ತರಕಾರಿಗಳನ್ನು ವೀಕ್ಷಿಸಿ ಅದರ ಮಹತ್ವ ತಿಳಿದುಕೊಂಡರು. ಶಿಕ್ಷಕರಾದ ದೀಪಿಕಾ, ಅಶ್ವಿನಿ, ರೇಷ್ಮಾ, ಜಾಫ್ರಿನ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net