ತರಕಾರಿ ವಾಹನ ಪಲ್ಟಿ

LORRY PULTY IN ARBAIL
Published on

ಯಲ್ಲಾಪುರ: ತರಕಾರಿ ತುಂಬಿದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಸಂಭವಿಸಿದೆ.

ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ವಾಹನ, ಅರಬೈಲ್ ಘಟ್ಟದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ವಾಹನದಲ್ಲಿದ್ದ ತರಕಾರಿ ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆ ಹರಡಿ ಬಿದ್ದಿದೆ. ಚಾಲಕ-ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.

ಹೆದ್ದಾರಿಯ ಮಧ್ಯೆ ವಾಹನ ಪಲ್ಟಿಯಾದ ಕಾರಣಕ್ಕಾಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು.

ಗಟಾರಕ್ಕಿಳಿದ ಸರಕು ಸಾಗಾಟ ಲಾರಿ

ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಆರತಿಬೈಲ್ ಘಟ್ಟದಲ್ಲಿ ಸಂಭವಿಸಿದೆ.

ಅಂಕೋಲಾ ಕಡೆಯಿಂದ ಹುಬ್ಬಳ್ಳಿವಕಡೆಗೆ ಹೊರಟಿದ್ದ ಲಾರಿ ಆರತಿಬೈಲ್ ಘಟ್ಟದಲ್ಲಿ ಚಾಲಕನ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರಕ್ಕೆ ಉರುಳಿದೆ. ಲಾರಿ ಜಖಂ್ಗೊಂಡಿದ್ದು, ಚಾಲಕ, ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net