ತರಕಾರಿ ಬೆಲೆ ಗಗನಕ್ಕೆ; ಕೆಜಿಗೆ 500 ರೂ. ತಲುಪಿದ ಬೆಳ್ಳುಳ್ಳಿ, ನುಗ್ಗೆಕಾಯಿ !

veg
Published on

ಬೆಂಗಳೂರು: ಇತ್ತೀಚೆಗೆ ಫೆಂಗಲ್ ಚಂಡಮಾರುತದ ಪ್ರಭಾವದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಪರಿಣಾಮವಾಗಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರರ ಜೇಬಿಗೆ ಕತ್ತರಿ ಬಿದ್ದಿದೆ.

ಬೆಲೆ ಏರಿಕೆಯ ಬಿಸಿ ಬಹುಬೇಗ ಗ್ರಾಹಕರಿಗೆ ತಟ್ಟುವುದು ತರಕಾರಿಯಲ್ಲಿ. ಇತ್ತೀಚೆಗೆ ಫೆಂಗಲ್ ಚಂಡಮಾರುತದಿಂದ ಸುರಿದ ಅಕಾಲಿಕ ಮಳೆಯು ತಮಿಳುನಾಡು, ಪಾಂಡಿಚೇರಿ ಮತ್ತು ಕರ್ನಾಟಕದಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಟಾವಿಗೆ ಬಂದಿದ್ದ ಹಲವು ತರಕಾರಿ ಬೆಳೆಗಳು ನಾಶವಾಗಿದ್ದು, ಇದರಿಂದಾಗಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಹೆಚ್ಚಾಗಿದೆ.

ಬಹುದಿನಗಳಿಂದ ಏರಿಕೆ ಕಂಡಿದ್ದ ಬೆಳ್ಳುಳ್ಳಿ ಜೊತೆಗೆ ನುಗ್ಗೆಕಾಯಿ ಬೆಲೆ ಕೆಜಿಗೆ ದಾಖಲೆಯ 500 ರೂಪಾಯಿ ಗಡಿ ದಾಟಿದೆ. ಇದರಿಂದಾಗಿ ಒಂದು ನುಗ್ಗೆಕಾಯಿ ಬೆಲೆ 50 ರೂಪಾಯಿ ಆದಂತಾಗಿದೆ. ಈರುಳ್ಳಿ ಬೆಲೆ ಕೂಡಾ ಕೆಜಿಗೆ 70-80 ರೂ. ಆಗಿದೆ.

ಕಳೆದ ಕೆಲ ದಿನಗಳಿಂದ ಈರುಳ್ಳಿ-ಬೆಳ್ಳುಳ್ಳಿ ಬೆಲೆ ಕಡಿಮೆ ಆಗುತ್ತಲೇ ಇಲ್ಲ. ಇದೀಗ ಉಳಿದ ತರಕಾರಿ ಬೆಲೆಯೂ ಹೆಚ್ಚಾಗಿದೆ. ವ್ಯಾಪಾರಿಗಳನ್ನ ಕೇಳಿದರೆ ಮಳೆಯಿಂದ ತರಕಾರಿ ಬೆಳೆ ನಾಶವಾಗಿದೆ ಅಂತಿದಾರೆ. ಒಟ್ಟಿನಲ್ಲಿ ಕಾರಣ ಏನೇ ಇದ್ದರೂ ಪರಿಣಾಮ ಮಾತ್ರ ಗ್ರಾಹಕರೇ ಎದುರಿಸುವಂತಾಗಿದೆ.

-ಶಾಂತ ಸಣ್ಣಗೌಡರ್, ಗ್ರಾಹಕಿ, ಗಿರಿನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net