

ಭಟ್ಕಳ: ಹಸಿರು ತರಕಾರಿಗಳ ಸೇವನೆಯಿಂದ ಆರೋಗ್ಯದ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಎಂದು ಬೈಲೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಎಚ್. ಹೇಳಿದರು.
ತಾಲೂಕಿನ ಮುರ್ಡೇಶ್ವರದ ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ವೆಜಿಟೆಬಲ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಜಗನ್ನಾಥ ಚನ್ನಾಕೆರೆ ಮಾತನಾಡಿದರು. ಪ್ರಾಧ್ಯಾಪಕರಾದ ನವೀನ ಗೋರಿ ಉಪಸ್ಥಿತರಿದ್ದರು. ಶಿಕ್ಷಕಿಯಾದ ಹಂಸಾ ಪಟಗಾರ ಸ್ವಾಗತಿಸಿದರು. ಪದ್ಮಾವತಿ ಮೋಗೆರ ವಂದಿಸಿದರು. ದೀಕ್ಷಾ ಶೆಟ್ಟಿ ಸಹಕರಿಸಿದರು.
ಕಾರ್ಯಕ್ರಮದ ನಂತರ ಮಕ್ಕಳು ವಿವಿಧ ತರಕಾರಿಗಳ ಮಹತ್ವವನ್ನು ಹಾಡು, ನೃತ್ಯ, ಭಾಷಣದ ಮೂಲಕ ತಿಳಿಸಿದರು.