

ಕೊಕ್ಕರ್ಣೆ: ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೊಕ್ಕರ್ಣೆ ರೈತ ಉತ್ಪದಕರ ಕಂಪನಿ, ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿ ಆಶ್ರಯದಲ್ಲಿ ತರಕಾರಿ ಬೆಳೆಗಳಲ್ಲಿ ನೂತನ ತಂತ್ರಜ್ಞಾನ ಹಾಗೂ ಕೀಟ ರೋಗಗಳ ಸಮಗ್ರ ನಿರ್ವಹಣೆ ಕುರಿತು ವಿಚಾರ ಸಂಕಿರಣ ರೈತ ಉತ್ಪಾದಕರ ಕಂಪನಿ ವಠಾರದಲ್ಲಿ ನಡೆಯಿತು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಲ್.ಹೇಮಂತ ಕುಮಾರ್ ಪ್ರಸ್ತಾವಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಗುರುಪ್ರಸಾದ್ ಇಲಾಖೆ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ವಲಯ ಕೃಷಿ, ತೋಟಗಾರಿಕಾ ಸಂಶೋಧನಾ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ.ಚೈತನ್ಯ ಎಚ್.ಎಸ್., ಡಿಆರ್‌ಸಿ ಪಿಎಂಎಫ್‌ಎಂಇ ಯೋಜನೆಯ ವೆಂಕಟೇಶ್, ಬೆನಗಲ್ ಸೊಸೈಟಿ ಕಾರ್ಯದರ್ಶಿ ನಾಗರಾಜ್ ಉಳಿತ್ತಾತ, ಕೊಕ್ಕರ್ಣೆ ಎಫ್‌ಪಿಒ ಅಧ್ಯಕ್ಷ ವಿಶ್ವನಾಥ ಅಡಿಗ, ಜಲಾನಯನ ವಿಭಾಗದ ಶ್ರೀರಾಮ ಹೆಗಡೆ, ಜಿಲ್ಲಾ ಸಂಯೋಜಕಿ ಉಷಾ ಸಂತೋಷ್, 3ಎಫ್ ಆಯ್ಲ ಫಾರ್ಮ್ ಕಂಪನಿಯ ಏರಿಯಾ ಮ್ಯಾನೇಜರ್ ಕೃಷ್ಣ ವೈ.ಟಿ. ಮತ್ತಿತರರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಗ್ರಾಪಂ ಕೃಷಿ ಸಖಿಯರು, ಕೊಕ್ಕರ್ಣೆ ರೈತ ಬಂಧುಗಳು ಹಾಜರಿದ್ದರು. ಕೊಕ್ಕರ್ಣೆ ಎಫ್‌ಪಿಒ ಉಪಾಧ್ಯಕ್ಷೆ ಬೇಬಿ ಪೂಜಾರಿ ಸ್ವಾಗತಿಸಿದರು.