ದಾವಣಗೆರೆ ಮಹಾಧಿವೇಶನ ಯಶಸ್ಸಿಗೆ ನಿರ್ಧಾರ

IMG-20231219-WA0010.jpg
Published on

ಹುಬ್ಬಳ್ಳಿ: ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾ ಅಧಿವೇಶನ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಮಂಗಳವಾರ ಇಲ್ಲಿಯ ಮೂರುಸಾವಿರ ಮಠ ಆವರಣದಲ್ಲಿ ನಡೆಯಿತು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಡಿ. 23 ಹಾಗೂ 24ರಂದು ದಾವಣಗೆರೆಯಲ್ಲಿ ಮಹಾಅಧಿವೇಶನ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.

ಮಹಾಸಭಾ ತಾಲೂಕು ಅಧ್ಯಕ್ಷ ಶಶಿಶೇಖರ ಡಂಗನವರ ಅಧ್ಯಕ್ಷತೆ ವಹಿಸಿದ್ದರು.
ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ದೇವರಾಜ ಧಾಡಿಬಾವಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಹೆಬಸೂರ. ವಿಜಯ ಗುಡ್ಡದ, ಸಿದ್ದಣ್ಣ ಹಂಡೆದ, ವಿಕಾಸ ಸೊಪ್ಪಿನ, ಸದಾನಂದ ಚೌಶೆಟ್ಟಿ, ಅನಿಲ್ ಕವಿಶೆಟ್ಟಿ, ಡಾ. ಬಸವಕುಮಾರ ತಲವಾಯಿ ಉಪಸ್ಥಿತರಿದ್ದರು.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಮಹಾಸಭಾ ನೂತನ ಪದಾಧಿಕಾರಿಗಳಾಗಿ ಹನುಮಂತಪ್ಪ ಹತಿರ್, ಮಂಜುನಾಥ ಹಳ್ಯಾಳ, ರವಿರಾಜ ಕೊಡ್ಲಿ, ವಿನೋದಗೌಡ ಪಾಟೀಲ್, ಗಂಗಾಧರ ಗುಜಮಾಗಡಿ, ವಿರೇಶ ಕೆಸರಪ್ಪನವರ, ರಾಮನಗೌಡ ಶೆಟ್ಟನಗೌಡರು, ಗುರುರಾಜ ಹೂಗಾರ, ಬಸಪ್ಪ ಕಾರಿಕಾಯಿ, ಮೃತ್ಯುಂಜಯ ಮಟ್ಟಿ, ಈರಣ್ಣ ಶಿರಹಟ್ಟಿಮಠ, ಸಿದ್ದಲಿಂಗೇಶ ತೆಂಗಿನಕಾಯಿ, ಬಸವರಾಜ ಹಿತ್ತಲಮನಿ, ಸದಾಶಿವ ಹುಬ್ಬಳ್ಳಿ ಹಾಗೂ ಇತರರು ಶ್ರೀಗಳಿಂದ ಅಧಿಕಾರ ಪತ್ರ ಸ್ವೀಕರಿಸಿದರು. ಬಸವರಾಜ ಸಗರದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net