ವೀರಶೈವ ಮಹಾಸಭೆ ಇಬ್ಬಂದಿತನ: ಸ್ವಾಮೀಜಿ ಹೆಸರು ಕೈಬಿಟ್ಟಿದ್ದಕ್ಕೆ ನರಿಬೋಳ ಕಿಡಿ

M S Patil Naribol
Published on

ಕಲಬುರಗಿ: ವೀರಶೈವ ಲಿಂಗಾಯತ ಸಮಾಜದ ಯುವ ನಾಯಕ ಚಂದು ಪಾಟೀಲ್‌ಗೆ ಜೀವ ಬೆದರಿಕೆ ಬಗ್ಗೆ ಭದ್ರತೆ ನೀಡಲು ವೀರಶೈವ ಲಿಂಗಾಯತ ಮಹಾಸಭೆ ಮನವಿ ಮಾಡಿದ್ದು, ಸ್ವಾಗತಾರ್ಹ ನಿರ್ಧಾರ. ಆದರೆ ಅದೇ ಪ್ರಕರಣದಲ್ಲಿ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಹೆಸರನ್ನು ಉಲ್ಲೇಖಿಸದೆ ಮಹಾಸಭೆ ಇಬ್ಬಗೆ ನೀತಿ ಅನುಸರಿಸಿದೆ ಎಂದು ಮಹಾಸಭೆ ಸದಸ್ಯತ್ವ ಅಭಿಯಾನದ ಪ್ರಮುಖ ಎಂ.ಎಸ್.ಪಾಟೀಲ್ ನರಿಬೋಳ ಬೇಸರ ವ್ಯಕ್ತಪಡಿಸಿದ್ದಾರೆ. ಮಹಾಸಭೆಯವರಿಗೆ ಈ ವಿಷಯದ ಅರಿವು ಇಲ್ಲವೇ, ಸಮಾಜದ ಸಮಸ್ಯೆ ಬಂದಾಗ ಧ್ವನಿ ಎತ್ತುವ ಜಿಲ್ಲೆಯ ಪ್ರಮುಖ ಮತ್ತು ಸಮಾಜದ ಗಟ್ಟಿ ಧ್ವನಿಯಾಗಿರುವ ಪೂಜ್ಯರ ಹೆಸರು ಕೈ ಬಿಟ್ಟಿರುವುದು ದುರಂತ ಮತ್ತು ಸಣ್ಣತನದ ಪ್ರದರ್ಶಿಸಿದ್ದಾರೆ. ಶ್ರೀಗಳ ನಿರ್ಲಕ್ಷÈ ಸಲ್ಲದು. ಇದು ಸಮಾಜದ ನಾಯಕರ ಲಕ್ಷಣವಲ್ಲ. ಶ್ರೀಗಳಿಗೂ ಭದ್ರತೆ ಕೊಡಲು ಆಗ್ರಹಿಸದ ಮಹಾಸಭೆ ನಿರ್ಧಾರ ಖಂಡನೀಯ. ಈ ಬಗ್ಗೆ ರಾಜ್ಯಾಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net