

ಶಿರಹಟ್ಟಿ: ಹದಿನಾರು ಸದಸ್ಯ ಬಲದ ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ವೀರಯ್ಯ ಪ್ರಭಯ್ಯ ಮಠಪತಿ ಮತ್ತು ಪಾಲಾಕ್ಷಪ್ಪ ಶಿವಮೂರ್ತೆಪ್ಪ ಈಳಗೇರ ನಾಮಪತ್ರ ಸಲ್ಲಿಸಿದ್ದರು. ವೀರಯ್ಯ ಪ್ರಭಯ್ಯ ಮಠಪತಿ 9 ಮತ ಪಡೆದು ಆಯ್ಕೆಯಾದರೆ, ಪಾಲಾಕ್ಷಪ್ಪ ಈಳಗೇರ 7 ಮತ ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ವೀಣಾ ಸುರೇಶ ತಳವಾರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ತಾಪಂ ಇಒ ಎಸ್.ಎಸ್. ಕಲ್ಮನಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.